ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಂಧನದಲ್ಲಿರುವ ನಟ ದರ್ಶನ್ ಮತ್ತವರ ಗ್ಯಾಂಗ್ ಅನ್ನು ಕೋರ್ಟ್ ಮತ್ತೆ ಪೊಲೀಸ್ ಕಸ್ಟಡಿಗೆ ಕೊಟ್ಟಿದೆ. ಬೆಂಗಳೂರಿನ ಆರ್ಥಿಕ ಅಪರಾಧಗಳ ನ್ಯಾಯಾಲಯದಲ್ಲಿ ಆರೋಪಿಗಳ ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯ ಮತ್ತೆ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಈ ಮೂಲಕ ‘ಡಿ’ ಗ್ಯಾಂಗ್‌ಗೆ ಜೈಲೇ ಗತಿಯಾಗಿದೆ. ಈ ಮೂಲಕ ದರ್ಶನ್ & ಗ್ಯಾಂಗ್ ಇದೇ ಜೂನ್ 20 ರವರೆಗೆ ಪೊಲೀಸ್ ಕಸ್ಟಡಿಯಲ್ಲಿ ಇರಬೇಕಾಗಿದೆ. ಕಳೆದ 5 ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದ ದರ್ಶನ್ ಗ್ಯಾಂಗ್ ಮತ್ತೆ ಪೊಲೀಸ್ ಕಸ್ಟಡಿಗೆ ನೀಡಿ ಜಡ್ಜ್ ವಿಶ್ವನಾಥ್ ಸಿ ಗೌಡರ್ ಅವರು ಮಹತ್ವದ ಆದೇಶ ನೀಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್, ಪವಿತ್ರಾ ಸೇರಿ 10 ಆರೋಪಿಗಳ ಪೊಲೀಸ್ ಕಸ್ಟಡಿ ಮುಂದುವರಿಯಲಿದೆ. ನಟ ದರ್ಶನ್ ಕೊಲೆ ಕೇಸ್‌ನಲ್ಲಿ SPP ಪ್ರಸನ್ನ ಕುಮಾರ್ ಅವರು ಕೋರ್ಟ್‌ಗೆ ಕೊಲೆಯ ಬಗ್ಗೆ ಇಂಚಿಂಚು ಮಾಹಿತಿಯನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ. ಆರೋಪಿ ದರ್ಶನ್ ಅವರು ಕೊಲೆ ಬಳಿಕ ಮೈಸೂರಿಗೆ ಹೋಗಿದ್ದಾರೆ. ಅಲ್ಲಿ ಘಟನೆಯ ಬಗ್ಗೆ ಇತರ ಆರೋಪಿಗಳ ಜೊತೆ ಸಂಭಾಷಣೆ ಆಗಿದೆ. ಅಲ್ಲದೇ ಆರೋಪಿ ಪ್ಲಾನ್‌ನಂತೆ ಕೆಲ ಆರೋಪಿಗಳು ಸುಳ್ಳು ಕಥೆ ಹೇಳಿ ಸರೆಂಡರ್ ಆಗಲು ಹೋಗಿದ್ದಾರೆ. ಹೀಗಾಗಿ ಮತ್ತಷ್ಟು ದಿನ ಕಸ್ಟಡಿ ನೀಡುವಂತೆ ಮನವಿ ಮಾಡಿದ್ದಾರೆ. ಇದೇ ವೇಳೆ, SPP ಪ್ರಸನ್ನ ಕುಮಾರ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನ ವಿಡಿಯೋ ಸಾಕ್ಷಿಗಳನ್ನು ಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದಾರೆ. ಅದರಲ್ಲಿ ತುಂಬಾ ಗಂಭೀರ ಅಂಶಗಳಿವೆ ಎನ್ನಲಾಗಿದೆ. ಅದನ್ನ ಒಮ್ಮೆ ನೋಡುವಂತೆ ನ್ಯಾಯಾಧೀಶರಿಗೆ ಎಸ್‌ಪಿಪಿ ಪ್ರಸನ್ನ ಕುಮಾರ್ ಮನವಿ ಮಾಡಿದ್ದಾರೆ. ಆರೋಪಿಗಳು ಮೃತನಿಗೆ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ಕೊಲೆಗೂ ಮುನ್ನ ಕರೆಂಟ್ ಶಾಕ್ ನೀಡಿದ್ದಾರೆ. ಆ ಡಿವೈಸ್ ಇನ್ನೂ ತನಿಖೆಯಲ್ಲಿ ಸಿಕ್ಕಿಲ್ಲ. ಅದನ್ನ ಆರೋಪಿಗಳು ನಾಶ ಮಾಡಿರುವ ಸಾಧ್ಯತೆ ಇದೆ. ಹೀಗಾಗಿ ಅದರ ರಿಕವರಿ ಮಾಡಬೇಕಿದೆ ಅನ್ನೋ ಮಾಹಿತಿಯನ್ನು ಕೋರ್ಟ್‌ಗೆ ಪ್ರಸನ್ನ ಕುಮಾರ್ ನೀಡಿದ್ದಾರೆ. ಇದೇ ವೇಳೆ ದರ್ಶನ್ ಪರ ವಕೀಲ ಅನಿಲ್ ಬಾಬು ಅವರು ಕೊಲೆ ಪ್ರಕರಣದಲ್ಲಿ ಪೊಲೀಸರು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಆರೋಪಿ 5 & 14 ರ ಜೊತೆ ಮೃಗೀಯ ವರ್ತನೆ ತೋರಿದ್ದು, ಅವರಿಗೂ ಕರೆಂಟ್ ಶಾಕ್ ಕೊಟ್ಟು ಟಾರ್ಚರ್ ನೀಡಿದ್ದಾರೆ. ಹೀಗಾಗಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಒಟ್ಟಾರೆಯಲ್ಲಿ ಎ1 ಪವಿತ್ರಗೌಡ, ಎ2 ದರ್ಶನ, ಎ3 ಪವನ್, ಎ4 ರಾಘವೇಂದ್ರ, ಎ5 ನಂದೀಶ್, ಎ6 ಜಗದೀಶ್, ಎ7 ಅನುಕುಮಾರ್, ಎ10ವಿನಯ್ ,ಎ12ಲಕ್ಷ್ಮಣ್,ಎ13ದೀಪಕ್, ಎ14 ಪ್ರದೋಶ್, ಎ16ನಿಖಿಲ್ ಆರೋಪಿಗಳು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.