ಬೆಂಗಳೂರು: ಕೊಲೆ ಕೇಸ್‌ನಲ್ಲಿ ಜೈಲು ವಾಸದಲ್ಲಿರೋ ನಟ ದರ್ಶನ್ ಅವರು ಬಿಡುಗಡೆಗಾಗಿ ಕುಟುಂಬ ದೇವರ ಮೊರೆ ಹೋಗಿದ್ದಾರೆ. ಜೈಲುವಾಸ ಮುಗಿದು ಕಷ್ಟದ ಸಮಯದಿಂದ ದರ್ಶನ್ ಹೊರಬರಲಿ ಅಂತ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಲವು ದೇವಾಲಯಗಳಲ್ಲಿ ಹರಕೆ ಹೊತ್ತಿದ್ದಾರಂತೆ. ಇನ್ನು ದರ್ಶನ್ ತಾಯಿ ಮತ್ತು ಸಹೋದರ ಸಹ ಹರಕೆ ಕಟ್ಟಿಕೊಂಡಿದ್ದಾರಂತೆ. ರಿಲೀಸ್ ಆದ ಬಳಿಕ ದರ್ಶನ್ ಸಮೇತ ಸನ್ನಿಧಿಗೆ ಬಂದು ಹರಕೆ ತೀರಿಸೋದಾಗಿ ಹರಕೆ ಕಟ್ಟಿಕೊಂಡಿದ್ದಾರಂತೆ. ಪೂಜೆ ಮಾಡಿಸಿ ಜೈಲಿನಲ್ಲಿರುವ ದರ್ಶನ್ ಭೇಟಿ ವೇಳೆ ಚಾಮುಂಡೇಶ್ವರಿ ಪ್ರಸಾದವನ್ನ ಪತ್ನಿ ವಿಜಯಲಕ್ಷ್ಮಿ ನೀಡಿದ್ದಾರೆ. ಈ ವೇಳೆ ದರ್ಶನ್ ಚಪ್ಪಲಿ ಬಿಟ್ಟು ವಿನಮ್ರವಾಗಿ ಪ್ರಸಾದ ಸ್ವೀಕರಿಸಿದ್ದಾರೆ ಎನ್ನಲಾಗಿದೆ.
