ಬೆಂಗಳೂರು : ಸ್ಯಾಂಡಲ್ ವುಡ್ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಸದ್ಯ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿದ್ದು, ಬ್ಯುಸಿಯಾಗಿದ್ದಾರೆ. ಇದೀಗ ಅವರು ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾದಲ್ಲಿ ನಟಿಸುವ ಬಗ್ಗೆ ಸುಳಿವು ಕೊಟ್ಟಿದ್ದಾರೆ.
ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ಅವರು, ‘ದಳಪತಿ 69’ ಚಿತ್ರತಂಡವು ಒಂದೊಳ್ಳೆಯ ಪಾತ್ರ ಮಾಡಲು ನನ್ನನ್ನು ಅಪ್ರೋಚ್ ಮಾಡಿದ್ದು ನಿಜ. ಆ ಪಾತ್ರದ ಬಗ್ಗೆ ಕೇಳಿದಾಗ ಇಂಟರೆಸ್ಟಿಂಗ್ ಎಂದೆನಿಸಿತು. ಆದರೆ ಡೇಟ್ಸ್ ಅದೆಷ್ಟರ ಮಟ್ಟಿಗೆ ಹೊಂದಾಣಿಕೆ ಆಗಲಿದೆ ಎಂಬುದು ನನಗೆ ಗೊತ್ತಿಲ್ಲ. ನನ್ನ ಡೇಟ್ ನೋಡಿಕೊಂಡೆ ಎಲ್ಲವೂ ಪ್ಲ್ಯಾನ್ ಆಗುತ್ತದೆ ಅನಿಸುತ್ತದೆ ಎಂದಿದ್ದಾರೆ.
ವಿಜಯ್ ಒಳ್ಳೆಯ ನಟ. ಇದು ಅವರ ಕೊನೆಯ ಸಿನಿಮಾ ಎಂದು ನಾವು ಹೇಳಲೇಬಾರದು. ಅವರು ಸಿನಿಮಾ ಮತ್ತು ರಾಜಕೀಯ ಎರಡನ್ನು ಚೆನ್ನಾಗಿಯೇ ತಿಳಿದುಕೊಂಡಿದ್ದಾರೆ. ಆದರೆ ವಿಜಯ್ ಸಿನಿಮಾ ಮಾಡೋದನ್ನು ಬಿಡಬಾರದು. ಅವರು ಚಿತ್ರಗಳನ್ನು ಮಾಡುತ್ತಲೇ ಇರಬೇಕು ಎಂದು ಅವರು ಹೇಳಿದ್ದಾರೆ.
				
															
                    
                    
                    
                    
                    

































