ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವವನ್ನು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಉದ್ಘಾಟಿಸಿದರು. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಯ ಅಗ್ರ ಪೂಜೆ ನೆರವೇರಿಸಿದರು. ಈ ಮೂಲಕ ಸಂಭ್ರಮದ ದಸರಾ ಉತ್ಸವಕ್ಕೆ ಚಾಲನೆ ದೊರತಿದೆ. ಇದೇ ವೇಳೆ ಮಾತನಾಡಿದ ಹಂಸಲೇಖ ನಾಡಿನ ಕನ್ನಡದ ಸಿರಿತನ ಮನಸಾರೆ ಹೊಗಳಿ ಕೆಲವು ಸಲಹೆಗಳನ್ನು ನೀಡಿದರು. ಕನ್ನಡ ನಮ್ಮ ಶೃತಿ ಆಗಬೇಕು. ಅದರ ಅಭಿವೃದ್ಧಿ ನಮ್ಮ ಕೃತಿ ಆಗಬೇಕು. ನಮಗೆ ದೆಹಲಿ ಬೇಕು ದೆಹಲಿಗೂ ನಾವು ಬೇಕು. ದೆಹಲಿಗೆ ಯಾಕೋ ಕನ್ನಡ ಬೇಡ ಅನ್ನಿಸುತ್ತಿದೆ. ಅದರ ಚಿಂತೆ ಈಗ ಬೇಡ. ಕನ್ನಡವನ್ನು ನಾವು ಪ್ರಪಂಚದ ವೇದಿಕೆಯಲ್ಲಿ ಪರಿಚಯ ಮಾಡಿದರೆ ಅದು ನಮಗೆ ಹೆಮ್ಮೆ ಎಂದು ಹೇಳಿದರು. ಕರ್ನಾಟಕದಲ್ಲಿ ವಾಸ ಮಾಡುವ ಎಲ್ಲರು ಕನ್ನಡಿಗರೇ. ಹೀಗಾಗಿ ಯಾರಿಗೆ ಕನ್ನಡ ಗೊತ್ತಿಲ್ಲ ಅನ್ನೋದು ಸಮೀಕ್ಷೆ ಆಗಬೇಕು. ಸರ್ಕಾರ ಹಾಗೂ ಸಾರ್ವಜನಿಕರು ಇದಕ್ಕೆ ಒತ್ತಾಸೆ ಮಾಡಬೇಕೆಂಬುದು ಆಸೆ. ಕನ್ನಡ ಕಲಿಯಲು ಇಷ್ಟ ಪಡುವವರಿಗೆ 30 ದಿನದಲ್ಲಿ ಕನ್ನಡ ಕಲಿಸುವ ಕಾರ್ಯಕ್ರಮ ಜಾರಿಯಾಗಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು. ಸಂಗೀತ ನಿರ್ದೇಶಕ ಹಂಸಲೇಖ ನೀಡಿದ ಸಲಹೆಗಳೇನು..? ಡ ಓದಲು, ಬರೆಯಲು ಬಾರದವರ ಸಮೀಕ್ಷೆ ಆಗಬೇಕು ಕಾರ್ಪೋರೇಟ್ ಕನ್ನಡಿಗರ ತಂಡ ನನಗೆ ಸಲಹೆ ನೀಡಿದೆ ಕನ್ನಡ ಅರ್ಥ ಆಗುತ್ತೆ, ಆದರೆ ಓದಲು- ಬರೆಯಲು ಬರಲ್ಲ ಓದಲು-ಬರೆಯಲು ಬಾರದವರ ಸಮೀಕ್ಷೆ ಆಗಬೇಕು ಕನ್ನಡ ಗೊತ್ತಿಲ್ಲದವರಿಗೆ 30 ದಿನದಲ್ಲಿ ನಮ್ಮ ಭಾಷೆ ಕಲಿಸಬೇಕು ಕನ್ನಡ ಕಲಿತವರಿಗೆ ಜಮೀನಿನ ಆರ್‌ಟಿಸಿ ಮಾದರಿ ಕನ್ನಡ ಪಟ್ಟ ಕೊಡಿ ಅದು ಬಿಪಿಎಲ್, ಎಪಿಎಲ್ ಮಾದರಿಯ ದಾಖಲೆ ಆಗಬೇಕು ಇಡೀ ರಾಜ್ಯದಲ್ಲಿ ಪ್ರತಿಮೆ, ಉದ್ಯಮ ವಿನಿಮಯ ಆಗಬೇಕು ಹುಬ್ಬಳ್ಳಿ-ಬೆಳಗಾವಿಯಲ್ಲಿ ಪ್ರತಿಮೆ, ಉದ್ಯಮಗಳು ಬೆರೆಯುತ್ತಿವೆ ಮಂಗಳೂರು-ಮೈಸೂರು ನಡುವೆ ಸಾಂಸ್ಕೃತಿಕ ವಿನಿಮಯ ಆಗಲಿ ರಫ್ತುದಾರರು ಪಕ್ಕದ ರಾಜ್ಯಗಳ ಮೇಲೆ ಅವಲಂಬನೆ ಆಗಬಾರದು 31 ಜಿಲ್ಲೆಗಳನ್ನು ಜೋಡಿಸಿ ಪ್ರತಿಭೆ, ಉದ್ಯಮ ಹಂಚಿಕೊಳ್ಳಬೇಕು. ಕೃಷಿಕ-ಕಾರ್ಪೋರೇಟ್ ರಾಜ್ಯದಲ್ಲಿ ವಿನಿಮಯ ಆಗಬೇಕು.