ದಾಂಡೇಲಿಯಲ್ಲಿ ಸಾಮೂಹಿಕ ಸನ್ನಿ – ಏಕ ಕಾಲದಲಿ ಕೈ ಸೀಳಿಕೊಂಡ 14 ವಿದ್ಯಾರ್ಥಿನಿಯರು..!

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದ ಖಾಸಗಿ ಶಾಲೆವೊಂದರ ಹದಿನಾಲ್ಕು ವಿದ್ಯಾರ್ಥಿನಿಯರು ಕೈಯನ್ನು ಬ್ಲೇಡ್‌ನಿಂದ ಸೀಳಿಕೊಂಡಿರುವ ಘಟನೆ ನಡೆದಿದ್ದು. ಕಾರಣ ಮಾತ್ರ ನಿಗೂಢವಾಗಿದ್ದು ಜಿಲ್ಲಾಡಳಿತಕ್ಕೆ ತಲೆನೋವು ತಂದಿದೆ.

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದ ಖಾಸಗಿ ಶಾಲೆವೊಂದರ ಹದಿನಾಲ್ಕು ವಿದ್ಯಾರ್ಥಿನಿಯರು ಕೈಯನ್ನು ಬ್ಲೇಡ್‌ನಿಂದ ಸೀಳಿಕೊಂಡಿರುವ ಘಟನೆ ನಡೆದಿದ್ದು. ಕಾರಣ ಮಾತ್ರ ನಿಗೂಢವಾಗಿದ್ದು ಜಿಲ್ಲಾಡಳಿತಕ್ಕೆ ತಲೆನೋವು ತಂದಿದೆ.

ಶಿಕ್ಷಣ ಇಲಾಖೆ, ಪೊಲೀಸ್‌ ಇಲಾಖೆ ಮತ್ತು ಜಿಲ್ಲಾಡಳಿತ ವಿಚಾರಣೆ ನಡೆಸುತ್ತಿದೆ ಇದು ಶಾಲಾ ಆಡಳಿತ ಮಂಡಳಿ ಜತೆಗೆ ಪೋಷಕರೂ ಆತಂಕಕ್ಕೆ ಕಾರಣವಾಗಿದೆ.

Advertisement

ಖಾಸಗಿ ಶಾಲೆಯ ಒಂಬತ್ತು ಹಾಗೂ ಹತ್ತನೇ ತರಗತಿ ವಿದ್ಯಾರ್ಥಿನಿಯರು ಕೈಯನ್ನು ರಕ್ತ ಬರುವಂತೆ ಸೀಳಿಕೊಂಡಿದ್ದು ಕಂಡು ಬಂದಿತು.

ಮಾಹಿತಿ ಕಲೆ ಹಾಕಿದಾಗ ಎರಡೂ ತರಗತಿಯ ಒಟ್ಟು ಹದಿನಾಲ್ಕು ವಿದ್ಯಾರ್ಥಿನಿಯರು ಹೀಗೆ ಮಾಡಿಕೊಂಡಿದ್ದರು.

ಕೆಲವರು ಹತ್ತರಿಂದ ಹನ್ನೆರಡು, ಇನ್ನು ಕೆಲವು ಹದಿನಾಲ್ಕು ಕಡೆ ಕತ್ತರಿಸಿಕೊಂಡಿರುವುದು ಕಂಡು ಬಂದಿತ್ತು.

ಕೂಡಲೇ ಅವರನ್ನು ದಾಂಡೇಲಿ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ಕರೆ ದೊಯ್ಯಲಾಗಿದ್ದು ಎಲ್ಲರೂ ಆರೋಗ್ಯದಿಂದ ಇದ್ದಾರೆ.

ಶನಿವಾರ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ ಗಣೇಶ ಹಬ್ಬದ ರಜೆ ಇದ್ದುದರಿಂದ ಶಾಲಾ ಅಡಳಿತ ಮಂಡಳಿಯು ಎರಡು ದಿನದ ಬಳಿಕ ಇದನ್ನು ಗಂಭೀರವಾಗಿ ಸ್ವೀಕರಿಸಿದೆ.

ಮಾನಸಿಕ ತಜ್ಞರಿಗೆ ಈ ಕುರಿತು ಮಾಹಿತಿ ನೀಡಿದಾಗ ಅವರೂ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿದ್ಧಾರೆ.

ಅವರಿಗೆ ಓದಿನ ಒತ್ತಡವೂ ಇರಬಹುದು ಎನ್ನುವುದು ಮಾನಸಿಕ ತಜ್ಞರು ಉತ್ತರ ಕಂಡುಕೊಂಡಿದ್ದಾರೆ.

ಮುಂದೆ ಇದು ಅನಾಹುತಕ್ಕೆ ದಾರಿಯಾಗಬಾರದು ಎಂದು ಶಿಕ್ಷಣ ಇಲಾಖೆಯವರು ಪೊಲೀಸರಿಗೂ ಮಾಹಿತಿ ನೀಡಿದ್ದರು.

ಸ್ಥಳೀಯ ಸರ್ಕಲ್‌ ಇನ್ಸ್‌ಪೆಕ್ಟರ್‌ ಭೀಮಣ್ಣ ಸೂರಿ ಅವರು ವಿಚಾರಣೆ ನಡೆಸುತಿದ್ದು, ವಿದ್ಯಾರ್ಥಿನಿಯರನ್ನೂ ಕರೆಯಿಸಿ ವಿಚಾರಿಸಿದ್ಧಾರೆ.

ಒಬ್ಬರು ಒಂದೊಂದು ರೀತಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ನನ್ನ ತಾಯಿಗೆ ಕೆಟ್ಟ ಭಾಷೆಯಿಂದ ಬೈದಿದ್ದೆ. ಅದರ ತಪ್ಪಿಗೆ ಹೀಗೆ ಮಾಡಿಕೊಂಡೆ ಎಂದು ಒಬ್ಬ ವಿದ್ಯಾರ್ಥಿನಿ ಹೇಳಿಕೊಂಡಿದ್ದಾಳೆ.

ಕೆಲ ದಿನಗಳ ಹಿಂದೆ ತಮ್ಮ ಚಿಕ್ಕಪ್ಪನ ಸಾವು ಆಗಿದ್ದು, ಅದರಿಂದ ಹೊರ ಬರಲು ಆಗದೇ ಹೀಗೆ ಮಾಡಿಕೊಂಡಿದ್ದೇನೆ ಎಂದು ಉತ್ತರಿಸಿದ್ದಾಳೆ.

ನನ್ನ ಸಹಪಾಠಿ ನನಗೆ ಮಾತನಾಡಲು ಬಿಡಿಲಿಲ್ಲ. ಇದು ನನ್ನಲ್ಲಿ ಸಿಟ್ಟಿಗೆ ಕಾರಣವಾಯಿತು.

ಸ್ನೇಹಿತೆಗೆ ತೊಂದರೆ ಕೊಡುವ ಬದಲು ನಾನೇ ಶಿಕ್ಷೆ ಕೊಟ್ಟುಕೊಳ್ಳೋಣ ಎಂದು ಕೈ ಕತ್ತರಿಸಿಕೊಂಡಿರುವುದಾಗಿ ತಿಳಿಸಿದ್ಧಾಳೆ. ನಾನು ಕತ್ತರಿಸಿಕೊಂಡಿದ್ದನ್ನು ನೋಡಿ ಆಕೆಯೂ ಕೈ ಕತ್ತರಿಸಿಕೊಂಡಿದ್ಧಾಳೆ ಎಂದೂ ಹೇಳಿದ್ದಾಳೆ.

ಈ ಬಗ್ಗೆ ಪ್ರತಿಕ್ರೀಯಿಸಿರುವ ಎಸ್‌ಪಿ ವಿಷ್ಣುವರ್ದನ್ ಒಂದೇ ಶಾಲೆಯಲ್ಲಿ ಹೆಚ್ಚಿನ ವಿದ್ಯಾರ್ಥಿನಿಯರು ಹೀಗೆ ಮಾಡಿಕೊಂಡಿರುವುದು ಆತಂಕಕಾರಿಯೇ.

ಶಿಕ್ಷಣ, ಪೊಲೀಸ್‌ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಸಭೆಯನ್ನು ಕರೆಯುತ್ತಿದ್ದೇವೆ. ಮಕ್ಕಳ ವರ್ತನೆಗೆ ನಿಖರ ಕಾರಣ ಗೊತ್ತಾಗಿಲ್ಲ.

ಅವರು ಭಿನ್ನ ಉತ್ತರವನ್ನು ವಿಚಾರಣೆ ವೇಳೆ ಕೊಟ್ಟಿದ್ದಾರೆ. ವೃತ್ತಿಪರ ಮಾನಸಿಕ ತಜ್ಞರಿಗೂ ಈ ಘಟನೆಗಳನ್ನು ತಿಳಿಸಿ ವರದಿ ನೀಡುವಂತೆ ಕೋರಲಾಗಿದೆ.

ವಿದ್ಯಾರ್ಥಿಗಳಿಗೆ ಮೂರೂ ಇಲಾಖೆಯವರು ಸೇರಿ ಪೋಷಕರ ಸಮ್ಮುಖದಲ್ಲಿ ಮನವರಿಕೆ ಮಾಡಿಕೊಡುತ್ತೇವೆ ಎಂದಿದ್ದಾರೆ.

ಇನ್ನು ಘಟನೆ ಬಗ್ಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಪ್ರತಿಕ್ರೀಯೆ ನೀಡಿದ್ದು ಮಕ್ಕಳು ಯಾವ ಕಾರಣಕ್ಕಾಗಿ ಕೈ ಕೊಯ್ದುಕೊಂಡಿದ್ದಾರೆ ಎಂದು ಸ್ಪಷ್ಟ ಮಾಹಿತಿ ನೀಡುತ್ತಿಲ್ಲ.

ವಿಚಾರ ನನ್ನ ಗಮನಕ್ಕೆ ಬಂದ ತಕ್ಷಣ ತಹಶೀಲ್ದಾರ್‌ ಮತ್ತು ಶಿಕ್ಷಣ ಅಧಿಕಾರಿ ಜೊತೆ ಮಾತನಾಡಿ ವರದಿ ಕೊಡುವಂತೆ ಸೂಚನೆ ನೀಡಿದ್ದೆ.

ಆದರೆ ವಿದ್ಯಾರ್ಥಿಗಳು ವಿಚಾರಣೆ ವೇಳೆ ಅಧಿಕಾರಿಗಳಿಗೆ ಹಾರಿಕೆ ಉತ್ತರ ಕೊಟ್ಟಿದ್ದಾರೆ ಘಟನೆ ಬಗ್ಗೆ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆಯವರಿಗೂ ತನಿಖೆ ಮಾಡಲು ತಿಳಿಸಿದ್ದೇವೆ.

ಶಾಲೆಯಲ್ಲಿ ತೊಂದರೆ ಇದೆಯೇ ಎನ್ನುವ ಬಗ್ಗೆ ತನಿಖೆ ನಡೆಸಿದ್ದೇವೆ. ಆರೋಗ್ಯ ಇಲಾಖೆಯಿಂದ ಮಕ್ಕಳಿಗೆ ಕೌನ್ಸಿಲಿಂಗ್ ಮಾಡಲು ತಿಳಿಸಲಾಗಿದ್ದು, ಕೌನ್ಸಿಲಿಂಗ್ ನಂತರ ಮಕ್ಕಳು ಕೈ ಕೊಯ್ದುಕೊಂಡಿರುವ ಬಗ್ಗೆ ಮಾಹಿತಿ ಸಿಗಲಿದೆʼʼ ಎಂದಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement