ಬೆಂಗಳೂರು: ಬಳ್ಳಾರಿಯ ಬ್ರೂಸ್ಪೇಟೆ ಠಾಣೆ ಪೊಲೀಸರು ಭಾನುವಾರ ಭರ್ಜರಿ ಬೇಟೆ ಆಡಿದ್ದು, ಚಿನ್ನದ ವ್ಯಾಪಾರಿ ನರೇಶ್ ಸೋನಿ ಮನೆಯಲ್ಲಿ ದಾಖಲೆ ಇಲ್ಲದೆ ಇಟ್ಟಿದ್ದ 5 ಕೋಟಿ 60 ಲಕ್ಷ ರೂ. ನಗದು, 3 ಕೆಜಿ ಚಿನ್ನ, 68 ಕೆಜಿ ಬೆಳ್ಳಿ ಗಟ್ಟಿ, 103 ಕೆಜಿ ಬೆಳ್ಳಿ ಆಭರಣವನ್ನ ವಶಕ್ಕೆ ಪಡೆದಿದ್ದಾರೆ.
ಈ ಸಂಪತ್ತಿನ, ಚಿನ್ನಾಭರಣದ ಮೂಲ ಕೆದಕಿದ ಪೊಲೀಸರಿಗೆ, ಇದೆಲ್ಲ ಪ್ರಭಾವಿ ರಾಜಕಾರಣಿಗೆ ಸೇರಿದ್ದು ಎಂಬ ಅನುಮಾನ ಬಲವಾಗಿದೆ. ಚುನಾವಣೆ ಬಳಕೆಗಾಗಿ ರಾಜಕಾರಣಿಯು ಹಣ ಕೊಟ್ಟಿರುವ ಶಂಕೆ ಎದ್ದಿದೆ. ಮತದಾರರಿಗೆ ಹಂಚಲು, ಹವಾಲಾ ದಂಧೆಯಲ್ಲಿ ಬಳಸಲು ಹಣವನ್ನ ಸಂಗ್ರಹಿಸಿದ್ದ ಸಂಶಯ ಮೂಡಿದ್ದು ತನಿಖೆ ಮುಂದುವರೆಸಿದ್ದಾರೆ