ಬೇಕಾಗುವ ಸಾಮಗ್ರಿಗಳು
ಅನ್ನ – 2 ಕಪ್ ಗೋಡಂಬಿ – 5-6 ಕಾಳುಗಳು – 1 ಬಟ್ಟಲು (ಹದವಾಗಿ ಬೇಯಿಸಿದ ಹಸಿ ತೊಗರಿ ಕಾಳು, ಹಸಿ ಬಟಾಣಿ ಕಾಳು, ಹಸಿ ಅವರೆಕಾಳು, ಹಸಿ ಕಡಲೆ ಕಾಳು, ಹಸಿ ಕಡಲೆಕಾಯಿ ಬೀಜ) ತೆಂಗಿನ ತುರಿ – ಸ್ವಲ್ಪ ಒಗ್ಗರಣೆಗೆ – ಇಂಗು, ಸಾಸಿವೆ, ಉದ್ದಿನಬೇಳೆ, ಕಡಲೆ ಬೇಳೆ, ಕಡಲೇಕಾಯಿ ಬೀಜ, ಹಸಿಮೆಣಸಿನಕಾಯಿ, ಒಣ ಮೆಣಸು, ಉಪ್ಪು ರುಚಿಗೆ ತಕ್ಕಷ್ಟು, ಕರಿಬೇವು ಸ್ವಲ್ಪ, ಅರಿಶಿನ ಎರಡು ಚಿಟಿಕೆ, ನಿಂಬೆರಸ ಸ್ವಲ್ಪ, ಎಣ್ಣೆ ಸ್ವಲ್ಪ ಹೆಚ್ಚಿದ ಕೊತ್ತಂಬರಿ ಸೊಪ್ಪು.
ಮಾಡುವ ವಿಧಾನ
ಅನ್ನವನ್ನು ಅಗಲವಾದ ತಟ್ಟೆಯಲ್ಲಿ ಹಾಕಬೇಕು. ಎಣ್ಣೆ ಬಿಸಿ ಮಾಡಿ ಒಗ್ಗರಣೆ ಸಾಮಗ್ರಿಯನ್ನು ಹಾಕಿ ಸಿಡಿಸಬೇಕು. ಇದಕ್ಕೆ ಬೆಂದ ಕಾಳುಗಳನ್ನು ಹಾಕಿ ಬಾಡಿಸಬೇಕು. ನಂತರ ಅರಿಶಿಣ, ಉಪ್ಪು, ತೆಂಗಿನ ತುರಿ ಸೇರಿಸಬೇಕು. ಅನ್ನದ ಮೇಲೆ ನಿಂಬೆರಸ ಸೇರಿಸಿ ಚೆನ್ನಾಗಿ ಕಲಸಿ. ನಂತರ ಹುರಿದ ಗೋಡಂಬಿ ಮತ್ತು ಕಡಲೇಕಾಯಿ ಬೀಜ ಹಾಗೂ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಚಿತ್ರಾನ್ನ ಟೇಸ್ಟ್ ಮಾಡಿ ಕೊಡಿ.