ದೀಪಾವಳಿಗೆ ಉಚಿತ ಸಿಲಿಂಡರ್..!​ ಅರ್ಜಿ ಸಲ್ಲಿಸುವುದು ಹೇಗೆ..?

ದೇಶದೆಲ್ಲೆಡೆ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ. ಇದರ ಹಿಂದೆಯೇ ದೀಪಾವಳಿ ಕೂಡ ಬರಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಉತ್ತರ ಪ್ರದೇಶ ಸರ್ಕಾರ ಮಹಿಳೆಯರಿಗೆ ಭರ್ಜರಿ ಗಿಫ್ಟ್‌ ನೀಡಲು ಸಜ್ಜಾಗಿದೆ. ಈ ಬಾರಿಯ ದೀಪಾವಳಿಯಲ್ಲಿ ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ಯ (PM Ujjwala Yojana) ಎಲ್ಲಾ ಫಲಾನುಭವಿಗಳಿಗೆ ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡಲು ಮುಂದಾಗಿದೆ. ಈ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಹೌದು, ದೀಪಾವಳಿಗೂ ಮುನ್ನವೇ ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ಜೊತೆಗೆ, ಅಲ್ಲಿನ ಅಧಿಕಾರಿಗಳಿಗೆ ಎಲ್ಲ ರೀತಿಯ ವ್ಯವಸ್ಥೆ ಮಾಡುವಂತೆ ಸಿಎಂ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ. ಈ ಮೂಲಕ ಎಲ್ಲಾ ಫಲಾನುಭವಿಗಳು ಈ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಇದಲ್ಲದೆ, ನಮ್ಮ ರಾಜ್ಯದಲ್ಲಿಯೂ ಮಹಿಳೆಯರು ಈ ಯೋಜನೆ ಪ್ರಯೋಜನ ಪಡೆಯಬಹುದು. ಬನ್ನಿ, ಈ ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ಯ ಲಾಭ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ಎನ್ನುವುದನ್ನು ತಿಳಿಯೋಣ.

 

Advertisement

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ
ಮೊದಲು ಅಧಿಕೃತ https://www.pmuy.gov.in/ ವೆಬ್‌ಸೈಟ್‌ ಓಪನ್ ಮಾಡಿ.

ವೆಬ್‌ಸೈಟ್​ನಲ್ಲಿ ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ 3.0 ಕನೆಕ್ಷನ್’ ಮೇಲೆ ಕ್ಲಿಕ್ ಮಾಡಿ.

ಮುಂದಿನ ಪುಟದಲ್ಲಿ ‘ಹೊಸ ಉಜ್ವಲ 3.0 ಕನೆಕ್ಷನ್ ಅಪ್ಲಿಕೇಶನ್’ ಅನ್ನು ಕ್ಲಿಕ್ಕಿಸಿ.

ನಂತರ ಮೂರು ಕಂಪನಿಯ ಹೆಸರುಗಳು ಗೋಚರಿಸುತ್ತವೆ. ಅದರಲ್ಲಿ ಒಂದು ಕಂಪನಿಯನ್ನು ಆಯ್ಕೆಮಾಡಿ. ಮತ್ತು ‘ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ’ (Click Here To Apply) ಆಯ್ಕೆಯನ್ನು ಕ್ಲಿಕ್ಕಿಸಿ.

ಹೊಸ ಪುಟದಲ್ಲಿ ಬ್ರೈಟ್ ಬೆನಿಫಿಶಿಯರಿ ಕನೆಕ್ಷನ್ (Bright Beneficiary Connection) ಮೇಲೆ ಕ್ಲಿಕ್ಕಿಸಿ. ಬಳಿಕ, ‘ನಾನು ಮೇಲಿನ ಘೋಷಣೆಯನ್ನು ಸ್ವೀಕರಿಸುತ್ತೇನೆ’ ಎಂಬ ಆಯ್ಕೆಯನ್ನು ಆರಿಸಿ.

ನಂತರ ಸರ್ಚ್ ಡಿಸ್ಟ್ರಿಬ್ಯೂಟರ್ಸ್ (Search Distributors) ಪಕ್ಕದಲ್ಲಿರುವ ‘ಲೋಕಲ್ ವೈಸ್’ (Local wise) ಆಯ್ಕೆಯನ್ನು ಕ್ಲಿಕ್ಕಿಸಿ.

ಇಲ್ಲಿ ನಿಮ್ಮ ರಾಜ್ಯ, ಜಿಲ್ಲೆ ಮತ್ತು ವಿತರಕರ ಹೆಸರನ್ನು ಆಯ್ಕೆಮಾಡಿ.

ಬಳಿಕ, Next ಆಯ್ಕೆಮೇಲೆ ಕ್ಲಿಕ್ಕಿಸಿ.
ಮುಂದಿನ ಪುಟದಲ್ಲಿ ನೀವು ಕೆವೈಸಿ (KYC), ವಿಳಾಸ, ರೇಷನ್ ಕಾರ್ಡ್ ಮತ್ತು ಸಂಪರ್ಕ ವಿವರಗಳನ್ನು ನಮೂದಿಸಬೇಕು.

ಬಳಿಕ, ಬ್ಯಾಂಕ್ ಖಾತೆ ಮತ್ತು ಎಲ್‌ಪಿಜಿ (LPG ) ಸಂಪರ್ಕದ ವಿವರಗಳನ್ನು ಭರ್ತಿ ಮಾಡಬೇಕು.

ಎಲ್ಲಾ ಮಾಹಿತಿ ಭರ್ತಿ ಮಾಡಿದ ಬಳಿಕ ಆಧಾರ್ ಕಾರ್ಡ್, ವಿಳಾಸ, ಪಾಸ್‌ಪೋರ್ಟ್ ಸೈಜ್ ಫೋಟೋ ಮತ್ತು ರೇಷನ್ ಕಾರ್ಡ್‌ ಸೇರಿದಂತೆ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಬಳಿಕ, ಕುಟುಂಬದ ಸದಸ್ಯರನ್ನು ಆಯ್ಕೆ ಮಾಡಬೇಕು.

‘ಆಡ್ ಮೆಂಬರ್’ (Add Member) ಮೇಲೆ ಕ್ಲಿಕ್ಕಿಸಿ. ಬಳಿಕ ‘ಸಬ್ಮಿಟ್’ (Submit) ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ರಶೀದಿ ಲಭ್ಯವಾಗುತ್ತದೆ. ಈ ಮೂಲಕ ಉಚಿತ ಗ್ಯಾಸ್ ಸಿಲಿಂಡರ್‌ ಅರ್ಜಿ ಸಲ್ಲಿಕೆ ಸಂಪೂರ್ಣವಾಗುತ್ತದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement