ಬೆಂಗಳೂರು: ದೀಪಾವಳಿ ಹಬ್ಬಕ್ಕೆ ರಾಜ್ಯ ಸರ್ಕಾರ ರೈತರಿಗೆ ಸಿಹಿ ಸುದ್ದಿ ನೀಡಲಿದೆಯಂತೆ. ಅನ್ನದಾತರಿಗೆ 5 ಗಂಟೆಯ ಬದಲಿಗೆ 6 ಗಂಟೆ 3-ಫೇಸ್ ವಿದ್ಯುತ್ ನೀಡಲಾಗುವುದು ಎಂದು ಸಚಿವ M.B. ಪಾಟೀಲ್ ಹೇಳಿದ್ದಾರೆ.
ಆಯಾ ಪ್ರದೇಶದ ಅಗತ್ಯತೆಗೆ ತಕ್ಕಂತೆ ಸಮಯ ನಿಗದಿ ಮಾಡಲಾಗುವುದು ಎಂದಿದ್ದಾರೆ. ತೋಟದ ಮನೆಗಳ ಗೃಹ ಬಳಕೆಗಾಗಿ ಸಂಜೆ 6 ರಿಂದ ರಾತ್ರಿ 10 ಗಂಟೆವರೆಗೆ, ಕಬ್ಬು ಬೆಳೆಯುವ ಪ್ರದೇಶದಲ್ಲಿ ಬೇಡಿಕೆಯಂತೆ ರಾತ್ರಿ 2 ಬ್ಯಾಚ್ ಹಾಗೂ ಹಗಲು 2 ಬ್ಯಾಚ್ನಲ್ಲಿ ವಿದ್ಯುತ್ ಪೂರೈಕೆಗೆ ನಿರ್ಧರಿಸಲಾಗಿದೆ.