ಹಾಸನ: ದುಡ್ಡಿಗೆ, ಪೊಗರಿಗೆ ಹಾಗೂ ರೌಡಿಸಂಗೆ ನಾನು ಹೆದರುವವನಲ್ಲ. ಯಾವನೋ ಕರೆಂಟ್ ಕನೆಕ್ಷನ್ ಕೊಟ್ಟಿದ್ದಾನೆ. ನಾನು ನಿಂತು ವಿದ್ಯುತ್ ಸಂಪರ್ಕ ಕೊಡಿಸಿದ್ನಾ? ನನ್ನ ಮನೇಲಿ ಈ ಘಟನೆ ನಡೆದಿದೆ ಎಂದು ವಿಷಾದ ವ್ಯಕ್ತಪಡಿಸಿದೆ ಎಂದು ಮಾಜಿ ಸಿಎಂ ಹೆಚ್‍ಡಿಕೆ ಸಿಎಂ ಹಾಗೂ ಡಿಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಟ್ಗೋಸಿ ಕರೆಂಟ್ ಎಳೆದಿದ್ದಕ್ಕೆ ಸಿಎಂ ಹಾಗೂ ಡಿಸಿಎಂ ಕಾಂಪಿಟೇಷನ್ ಮೇಲೆ ಅಧಿಕಾರಿಗಳನ್ನು ಕಳುಹಿಸಿದ್ದಾರೆ. ಸಿಎಂ ಮತ್ತು ಡಿಸಿಎಂ ಅಧಿಕಾರಿಗಳಿಗೆ ನನ್ನ ಮೇಲೆ ಕೇಸ್ ಹಾಕುವಂತೆ ಆದೆಶಿಸಿಯೇ ನನ್ನ ಮನೆಗೆ ಕಳಿಸಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
17 ಯೂನಿಟ್‍ಗೆ 2,000 ರೂ. ಬಿಲ್ ಆಗಿದೆ. ಆದರೆ 68 ಸಾವಿರ ಕಟ್ಟುವಂತೆ ಬಿಲ್ ಕಳಿಸಿದ್ದರು. ಬಿಲ್ ನ ಹಣವನ್ನು ನಾನು ಕಟ್ಟಿದ್ದೇನೆ. ನನ್ನ ಪರಿಸ್ಥಿತಿಯೇ ಹೀಗಾದರೆ ಜನಸಾಮಾನ್ಯರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ.
ಈ ಘಟನೆಯಿಂದ ಇಲಾಖೆಗಳು ಯಾವ ರೀತಿ ನಡೆಯುತ್ತಿವೆ ಎಂದು ನನಗೊಂದು ಅನುಭವ ಆದಂತಾಯಿತು. ನಾನು ಈ ಬಗ್ಗೆ ದೂರು ನೀಡಿ, ಮುಂದೆ ಏನು ಮಾಡಬೇಕೋ ಅದನ್ನು ಮಾಡುತ್ತೇನೆ. ಕಾಲ ಹೀಗೆಯೇ ಇರುವುದಿಲ್ಲ ಎಂದು ಹೆಚ್‍ಡಿಕೆ ಎಚ್ಚರಿಕೆ ನೀಡಿದ್ದಾರೆ.