ನವದೆಹಲಿ: ಗುಡುಗು ಸಹಿತ ಭಾರಿ ಧೂಳಿನ ಚಂಡಮಾರುತವು ದೆಹಲಿಗೆ ಅಪ್ಪಳಿಸಿದ್ದು, ಮರಗಳು ನೆಲಸಮವಾಗಿದ್ದು, ಕಟ್ಟಡಗಳಿಗೆ ಹಾನಿಯಾಗಿದೆ. ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 23 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿ ಪೊಲೀಸರಿಗೆ ಮರ ಕಿತ್ತುಹಾಕುವ ಕುರಿತು 152 ಕರೆಗಳು ಮತ್ತು ಹಾನಿಗೊಳಗಾದ ಕಟ್ಟಡಗಳ ಬಗ್ಗೆ 55 ಕರೆಗಳು ಬಂದಿವೆ. ದ್ವಾರಕಾದಲ್ಲಿ ಚಂಡಮಾರುತದ ವೇಳೆ ಆಂಬ್ಯುಲೆನ್ಸ್ ಸೇರಿದಂತೆ ಎರಡು ವಾಹನಗಳ ಮೇಲೆ ಸೂಚನಾ ಫಲಕ ಬಿದ್ದ ಪರಿಣಾಮ ಮೂವರು ಗಾಯಗೊಂಡಿದ್ದಾರೆ.
