ದೆಹಲಿ: ಕಾರ್ಯಕ್ರಮವೊಂದಕ್ಕೆ ಹಾಕಲಾಗಿದ್ದ ತಾತ್ಕಾಲಿಕ ಟೆಂಟ್ ಕುಸಿದು ಬಿದ್ದು, 10ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡ ಘಟನೆ ದೆಹಲಿಯ ಜವಾಹರ್ಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆದಿದೆ.
ನೆಹರೂ ಕ್ರೀಡಾಂಗಣದ ಗೇಟ್ ನಂಬರ್ 2ರ ಬಳಿ ತಾತ್ಕಾಲಿಕ ಟೆಂಟ್ ಕುಸಿದು ಬಿದ್ದ ಪರಿಣಾಮ ಕಾರ್ಮಿಕರು ಸೇರಿದಂತೆ ಇತರರು ಗಾಯಗೊಂಡಿದ್ದಾರೆ. ಇನ್ನು ಟೆಂಟ್ ಅಡಿಯಲ್ಲಿ ಸಿಲುಕಿದ್ದವರನ್ನು ರಕ್ಷಣೆ ಮಾಡಿ, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅದೃಷ್ಠವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಟೆಂಟ್ ಕುಸಿದ ಮಾಹಿತಿ ತಿಳಿದ ಪೋಲಿಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿ ಟೆಂಟ್ ಅಡಿಯಲ್ಲಿ ಯಾರಾದರು ಸಿಲುಕಿದ್ದರೆ ಸುರಕ್ಷಿತವಾಗಿ ಹೊರತೆಯಲು ಶ್ರಮಿಸುತ್ತಿದ್ದಾರೆ.