ಬೆಂಗಳೂರು: ದೇವರಾಜೇಗೌಡ ಮೋಸ್ಟ್ ಕ್ರಿಮಿನಲ್ ಮ್ಯಾನ್. ಮುಂದಾದರೂ ಅವನ ಜೊತೆ ವ್ಯವಹಾರ ಮಾಡೋರು ಎಚ್ಚರಿಕೆಯಿಂದ ಇರಿ. ದೇವರಾಜೇಗೌಡ ಬರೀ ಫೋನ್‌ನಲ್ಲಿ ರೆಕಾರ್ಡ್ ಮಾಡಲ್ಲ. ಅವನ ಬಾಡಿನೇ ರೆಕಾರ್ಡ್ ಮಾಡುತ್ತೆ. ಆ ರೀತಿ ವ್ಯವಸ್ಥೆ ಇರುವ ಮನುಷ್ಯ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲೊಂದರಲ್ಲಿ ಸುದ್ದಿಗೋಷ್ಠಿ ನಡೆಸಿ ಪೆನ್ ಡ್ರೈವ್ ಕೇಸಲ್ಲಿ ಡಿಸಿಎಂ ಡಿಕೆಶಿ 100 ಕೋಟಿ ಆಫರ್ ನೀಡಿದ್ದರು. ಆಫರ್ ತಂದವರು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಎಂಬ ವಕೀಲ ದೇವರಾಜೇಗೌಡ ಅವರ ಆರೋಪಕ್ಕೆ ಸ್ಪಷ್ಟನೆ ನೀಡಿದ ಅವರು, ಪೆನ್‌ಡ್ರೈವ್‌ಗಳನ್ನ ದೇವರಾಜೇಗೌಡ, ಕಾರ್ತಿಕ್ ಅವರೇ ಮಾರಾಟಕ್ಕಿಟ್ಟಿದ್ದರು. ನಾನು ಅವನನ್ನ ಡಿಕೆ ಶಿವಕುಮಾರ್ ಅವರೊಂದಿಗೆ ಮಾತನಾಡಿಸಿ ತಪ್ಪು ಮಾಡಿದೆ ಎಂಬ ನೋವು ಕಾಡುತ್ತಿದೆ. ನನಗೂ ಪೆನ್‌ಡ್ರೈವ್‌ಗೂ ಸಂಬಂಧ ಇಲ್ಲ. ಗೆಸ್ಟ್ ಅಪಿಯರೆನ್ಸ್ ತರ 2 ದಿನ ನಾನು ಸಿಲುಕಿದ್ದೆ, ಆದರೆ ಮೊನ್ನೆ ದಿನ ಏನೋ ಬುಲ್ಲೆಟ್ ಹೊಡೆದಿದ್ದಾನೆ. ಅದಕ್ಕೆ ಈ ಸ್ಪಷ್ಟನೆ ನೀಡುತ್ತಿದ್ದೇನೆ ಎಂದರು.
ಡಿ.ಕೆ ಶಿವಕುಮಾರ್ ಅವರು ಮಾತನಾಡಬೇಕು ಅಂದಿರಲಿಲ್ಲ ಇವನೇ ಮಾತನಾಡಬೇಕು ಅಂದ ಅವರು ಹಲೋ ದೇವರಾಜೇಗೌಡ ಅಂದಿದ್ದರು ಅಷ್ಟೇ .ಪೆನ್‌ಡ್ರೈವ್ ಪ್ರಕರಣ ಪ್ರಾಮಾಣಿಕವಾಗಿ ತನಿಖೆ ನಡೆಯಲಿ. ಈ ಪೆನ್‌ಡ್ರೈವ್‌ಗಳನ್ನ ವ್ಯಾಪಾರಕ್ಕೆ ಇಟ್ಟುಕೊಂಡಿದ್ದೇ ದೇವರಾಜೇಗೌಡ ಮತ್ತು ಕಾರ್ತಿಕ್. ಪೊಲೀಸ್ ಭಾಷೆಯಲ್ಲಿ ಕೇಳಿದರೆ ಎಲ್ಲಾ ವಿಷಯ ಬೆಳಕಿಗೆ ಬರುತ್ತದೆ. ನನಗೂ, ಡಿ.ಕೆ ಶಿವಕುಮಾರ್‌ಗೂ ಈ ಪ್ರಕರಣಕ್ಕೆ ಯಾವುದೇ ಸಂಬಧ ಇಲ್ಲ ಎಂದು ಸ್ಪಷ್ಟನೆ ನೀಡಿದರು.