ಲಕ್ನೋ: ಧಾರ್ಮಿಕ ನಗರಗಳಲ್ಲಿನ ಪ್ರತಿಷ್ಠಿತ ದೇವಾಲಯಗಳ ಪುರಾತನ ಮತ್ತು ಐತಿಹಾಸಿಕ ಸಾರವನ್ನು ಕಾಪಾಡುವ ಸಲುವಾಗಿ ಅವುಗಳ ಹತ್ತಿರ ಬಹುಮಹಡಿ ಕಟ್ಟಡವನ್ನು ನಿರ್ಮಾಣ ಮಾಡಬಾರದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚಿಸಿದ್ದಾರೆ.
ಗೋರಖ್ಪುರ, ವಾರಣಾಸಿ ಹಾಗೂ ಮಥುರಾ-ವೃಂದಾವನದಂತಹ ಧಾರ್ಮಿಕ ನಗರಗಳ ಪುರಾತನ ಮತ್ತು ಐತಿಹಾಸಿಕ ಸಾರವನ್ನು ಕಾಪಾಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ದೇವಾಲಯಗಳ ಎತ್ತರವನ್ನು ಮೀರಿದ ಯಾವುದೇ ರೀತಿಯ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡದಂತೆ ಆಡಳಿತ ವಲಯಕ್ಕೆ ಸೂಚನೆ ನೀಡಿದ್ದಾರೆ.
ಧಾರ್ಮಿಕ ನಗರಗಳಲ್ಲಿನ ದೇವಾಲಯಗಳು ಹಾಗೂ ಇನ್ನಿತರ ಪವಿತ್ರ ಕಟ್ಟಡಗಳ ಎತ್ತರವನ್ನು ಮೀರಿದ ಬಹು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬಾರದು. ಈ ರೀತಿಯ ಕಟ್ಟಡ ನಿರ್ಮಾಣ ನಿಯಂತ್ರಣಕ್ಕೆ ಮಾಸ್ಟರ್ ಪ್ಲ್ಯಾನ್ ಮಾಡಬೇಕು. ನಾವೆಲ್ಲ ಒಟ್ಟಾಗಿ ಪಯತ್ನ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.