ಬೆಂಗಳೂರು: ಮುಜುರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವಂತ ದೇವಾಲಯಗಳ ಸುತ್ತಾಮುತ್ತ ಬೀಡಿ, ಸಿಗರೇಟ್, ಗುಟ್ಕಾ, ಪಾನ್ ಮಸಾಲಗಳಂತಹ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಶೀಘ್ರವೇ ಅಂಕುಶ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ.
ಈ ಕುರಿತಂತೆ ಕಾಂಗ್ರೆಸ್ ಪಕ್ಷದ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, ‘ಧರ್ಮ’ ಎಂದರೆ ಮನುಷ್ಯನಿಗೆ ಅಧ್ಯಾತ್ಮಿಕ ಅನುಭೂತಿ ನೀಡುವ ಮಾರ್ಗ ಮಾತ್ರ. ಆಧ್ಯಾತ್ಮಿಕ ಅನುಭೂತಿಯನ್ನು ನೀಡುವ ದೇವಾಲಯಗಳಲ್ಲಿ ಸ್ವಚ್ಛತೆ, ಪ್ರಶಾಂತತೆ ಇರಬೇಕಾಗುತ್ತದೆ ಎಂದು ಹೇಳಿದೆ.
ಮುಜರಾಯಿ ಇಲಾಖೆಯ ದೇವಾಲಯಗಳ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಗುಟ್ಕಾ, ಸಿಗರೇಟು ಸೇರಿದಂತೆ ಯಾವುದೇ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ನಮ್ಮ ಸರ್ಕಾರ ಎಂದು ತಿಳಿಸಿದೆ.
ಈ ನಿಯಮ ಇಲಾಖೆ ವ್ಯಾಪ್ತಿಯಲ್ಲಿ ಇರುವಂತ 33 ಸಾವಿರ ದೇವಾಲಯಗಳಿಗೂ ಅನ್ವಯ ಆಗಲಿದೆ.