ಲಂಡನ್: ಸೃಷ್ಟಿಯ ಮೂಲ ಧಾತು ಹಿಗ್ಸ್ ಬೋಸಾನ್(ದೇವ ಕಣ) ಅನ್ನು ಪತ್ತೆ ಮಾಡಿದ ನೋಬೆಲ್ ಪುರಸ್ಕೃತ ವಿಜ್ಞಾನಿ ಪೀಟರ್ ಹಿಗ್ಸ್ ಸ್ಕಾಟ್ಲ್ಯಾಂಡ್ನ ಎಡಿನ್ಬರ್ಗ್ ನಿವಾಸದಲಿ ನಿಧನರಾಗಿದ್ದಾರೆ.
ಅವರಿಗೆ 94 ವರ್ಷ ವಯಸ್ಸಾಗಿತ್ತು. ಅವರ ಸಾವಿಗೆ ರಕ್ತ ಸಂಬಂಧಿ ಸಮಸ್ಯೆ ಕಾರಣ ಎಂದು ಅವರ ಆಪ್ತ ಸ್ನೇಹಿತ, ಎಡಿನ್ಬರ್ಗ್ ವಿಶ್ವವಿದ್ಯಾಲಯದ ಭೌತ ವಿಜ್ಞಾನಿ ಅಲನ್ ವಾಕರ್ ಹೇಳಿದ್ದಾರೆ.
ಬಿಗ್ ಬ್ಯಾಂಗ್ ನಂತರ ಸೃಷ್ಟಿಯ ಮೂಲ ಎನ್ನಲಾದ ಹಿಗ್ಸ್ ಬಾಸನ್(ದೈವ ಕಣ) ಅಸ್ತಿತ್ವವನ್ನು ಅವರು ಪತ್ತೆ ಮಾಡಿದ್ದರು.
ಈ `ಹಿಗ್ಸ್ ಬೋಸಾನ್ ಕಣದ ಅಸ್ತಿತ್ವವನ್ನು ಬ್ರಿಟನ್ ವಿಜ್ಞಾನಿ ಪೀಟರ್ ಹಿಗ್ಸ್ ಸೇರಿದಂತೆ ಇತರ ಆರು ಭೌತವಿಜ್ಞಾನಿಗಳು 1964ರಲ್ಲಿ ಮೊದಲ ಬಾರಿ ಸೈದ್ಧಾಂತಿಕವಾಗಿ ನಿರೂಪಿಸಿದ್ದರು. ಕಣಭೌತಶಾಸ್ತ್ರದಲ್ಲಿ ಭಾರತೀಯ ವಿಜ್ಞಾನಿ ಸತ್ಯೇಂದ್ರನಾಥ್ ಬೋಸ್ ಹಾಗೂ ಐನ್ಸ್ಟೀನ್ ಅವರು ಹಿಂದೆ ಮಂಡಿಸಿದ್ದ ಸಿದ್ಧಾಂತ ಪೀಟರ್ ಹಿಗ್ಸ್ ಅವರಿಗೆ ಪ್ರೇರಣೆ ಆಗಿತ್ತು ಎಂಬುದು ವಿಶೇಷ.!