ತಿರುವನಂತಪುರಂ: ದೇಶದಲ್ಲೇ ಅತಿ ಹೆಚ್ಚು ಪಂಚತಾರಾ ಹೋಟೆಲ್‌ಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಕೇರಳ ರಾಜ್ಯ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ವಸತಿ ಘಟಕಗಳಿಗಾಗಿ ರಾಷ್ಟ್ರೀಯ ಡೇಟಾಬೇಸ್‌ನಲ್ಲಿ ಲಭ್ಯವಿರುವ ಇತ್ತೀಚಿನ ಮಾಹಿತಿ ಪ್ರಕಾರ, ಈ ವಿಚಾರ ಬಹಿರಂಗಗೊಂಡಿದೆ.ಪ್ರವಾಸಿಗರು ಮತ್ತು ಕಾರ್ಪೊರೇಟ್‌ಗಳಿಗೆ ಅನುಕೂಲಕರ ಸ್ಥಳಗಳೆಂದೇ ಜನಪ್ರಿಯವಾಗಿರುವ ಮಹಾರಾಷ್ಟ್ರ, ರಾಜಸ್ಥಾನ ಮತ್ತು ಗೋವಾದಂತಹ ರಾಜ್ಯಗಳನ್ನೇ ಕೇರಳ ಹಿಂದಿಕ್ಕಿದೆ. ಶ್ರೇಯಾಂಕದ ಪ್ರಕಾರ, ಮಹಾರಾಷ್ಟ್ರವು ಒಟ್ಟು 35 ಪಂಚತಾರಾ ಹೋಟೆಲ್‌ಗಳೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಗೋವಾ ರಾಜ್ಯವು 32 ಫೈವ್ ಸ್ಟಾರ್ ಹೋಟೆಲ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ ಮತ್ತು ರಾಷ್ಟ್ರ ರಾಜಧಾನಿ ದೆಹಲಿ 27 ಪಂಚತಾರಾ ಹೋಟೆಲ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಕೇರಳದ ಪ್ರವಾಸೋದ್ಯಮದ ಅಭಿವೃದ್ಧಿಯಲ್ಲಿ ಸರ್ಕಾರ ಮತ್ತು ಖಾಸಗಿ ವಲಯಗಳೆರಡೂ ನಿರ್ಣಾಯಕ ಪಾತ್ರ ವಹಿಸಿವೆ. ಪ್ರವಾಸೋದ್ಯಮವನ್ನು ಬೆಂಬಲಿಸುವ ಅಗತ್ಯ ಮೂಲಸೌಕರ್ಯ ಮತ್ತು ಇತರೆ ಸೌಲಭ್ಯಗಳನ್ನು ಒದಗಿಸುವಲ್ಲಿ ಸರ್ಕಾರ ಪ್ರಮುಖ ಪಾತ್ರ ವಹಿಸಿದ್ದು, ಖಾಸಗಿ ವಲಯದವರು ಪ್ರವಾಸಿಗರನ್ನು ಆಕರ್ಷಿಸುವ ಮತ್ತು ಕೇರಳದಲ್ಲಿ ಪ್ರವಾಸಿಗರಿಗೆ ಹೆಚ್ಚು ಹಿತಕರವಾಗಿರುವಂತಹ ವಸತಿಗಳು, ರೆಸ್ಟೋರೆಂಟ್‌ಗಳು, ಪ್ರವಾಸ ಪ್ಯಾಕೇಜ್‌ಗಳು ಮತ್ತು ಇತರ ಕೊಡುಗೆ ನೀಡಿವೆ. ಸರ್ಕಾರಿ ಮತ್ತು ಖಾಸಗಿ ವಲಯದ ಸಂಯೋಜಿತ ಪ್ರಯತ್ನಗಳು ಕೇರಳಕ್ಕೆ ಭೇಟಿ ನೀಡುವ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸಲು ಕೊಡುಗೆ ನೀಡುತ್ತವೆ ಎಂದು ಕೇರಳ ಪ್ರವಾಸೋದ್ಯಮ ನಿರ್ದೇಶಕ ಪಿ.ಬಿ. ನೂಹ್ ಹೇಳಿದ್ದಾರೆ. ರಾಜ್ಯದ ಪಂಚತಾರಾ ಹೋಟೆಲ್‌ಗಳ ಪಟ್ಟಿಗೆ ಇತ್ತೀಚೆಗೆ ಸೇರ್ಪಡೆಯಾದ ಹ್ಯಾಟ್ ರೀಜೆನ್ಸಿ ತಿರುವನಂತಪುರದ (Hyatt Regency Trivandrum) ಜನರಲ್ ಮ್ಯಾನೇಜರ್ ರಾಹುಲ್ ರಾಜ್ ಮಾತನಾಡಿ, ವಿರಾಮಕ್ಕಾಗಿ ನೋಡುತ್ತಿರುವ ಪ್ರವಾಸಿಗರಿಗೆ ಮತ್ತು ಸಮ್ಮೇಳನಗಳು, ಪ್ರದರ್ಶನಗಳಂತಹ ವಿವಿಧ ವ್ಯಾಪಾರ ಕಾರ್ಯಕ್ರಮಗಳಿಗೆ ಆಕರ್ಷಕ ಮತ್ತು ಬೇಡಿಕೆಯ ತಾಣವಾಗಿ ಕೇರಳವನ್ನು ಬದಲಾಯಿಸುತ್ತದೆ. ಅಲ್ಲದೆ, ಕೇರಳದ ಆತಿಥ್ಯ ಕ್ಷೇತ್ರದ ಒಟ್ಟಾರೆ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ. ಪಂಚತಾರಾ ಹೋಟೆಲ್‌ನ ಸ್ಥಾಪನೆಯು ವಿಶೇಷವಾಗಿ ಆತಿಥ್ಯ ಕ್ಷೇತ್ರದಲ್ಲಿ ಹೊಸ ಉದ್ಯೋಗಾವಕಾಶಗಳಿಗೂ ದಾರಿ ಮಾಡಿಕೊಡುತ್ತದೆ. ಇದರಿಂದಾಗಿ ಈ ಪ್ರದೇಶದಲ್ಲಿ ವೃತ್ತಿಜೀವನದ ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುತ್ತದೆ ಎಂದರು. ತಮಾರಾ ಲೀಶರ್‌ನ (Tamara Leisure) ಸಿಇಒ ಮತ್ತು ನಿರ್ದೇಶಕಿ ಶ್ರುತಿ ಶಿಬುಲಾಲ್, ಈ ಸಾಧನೆಯು ಬಲವಾದ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಕೇರಳದಲ್ಲಿ ಆತಿಥ್ಯ ಮತ್ತು ಪ್ರವಾಸೋದ್ಯಮವನ್ನು ಸಕ್ರಿಯವಾಗಿ ಉತ್ತೇಜಿಸಲು ಮತ್ತು ಹೆಚ್ಚಿಸಲು ನಮ್ಮನ್ನು ಪ್ರೇರೇಪಿಸುತ್ತದೆ ಎಂದು ಹೇಳಿದರು.