‘ದೇಶದ ಜನ ಕಾರ್ಮಿಕರ ಸುರಕ್ಷಿತೆಗಾಗಿ ಪ್ರಾರ್ಥಿಸುತ್ತಿದ್ದರೆ ಗಾಂಧಿ ಕುಟುಂಬ ಡ್ಯಾನ್ಸ್‌ನಲ್ಲಿ ಮೈಮರೆತಿತ್ತು’- ಅಸ್ಸಾಂ ಸಿಎಂ ಗರಂ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಿರುದ್ದ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ರಾಹುಲ್‌ ಹಾಗೂ ಪ್ರಿಯಾಂಕಾ ಅವರ ಡ್ಯಾನ್ಸ್ ವೀಡಿಯೋ ನೋಡಿ ಶರ್ಮಾ ಗರಂ ಆಗಿದ್ದಾರೆ.

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಅಸ್ಸಾಂ ಸಿಎಂ, ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗವೊಂದರಲ್ಲಿ ¸ಸಿಲುಕಿಕೊಂಡ 41 ಮಂದಿ ಕಾರ್ಮಿಕರನ್ನು ಹೊರತರುವ ಪ್ರಯತ್ನ ನಡೆಯುತ್ತಿತ್ತು. ಈ ಕಾರ್ಯಾಚರಣೆ ನಡೆಯುತ್ತಿದ್ದಾಗ ಇಡೀ ದೇಶ ಕಾರ್ಮಿಕರ ಸುರಕ್ಷಿತವಾಗಿ ಹೊರಬರುವಂತೆ ಪ್ರಾರ್ಥನೆ ಮಾಡುತ್ತರಿದ್ದರು. ಆದರೆ ಗಾಂಧಿ ಕುಟುಂಬ ಮಾತ್ರ ಡ್ಯಾನ್ಸ್ ಮಾಡುವುದರಲ್ಲಿ ಮೈಮರೆತಿತ್ತು ಎಂದು ಕಿಡಿಕಾರಿದ್ದಾರೆ.

26/11 ರ ಮುಂಬೈ ದಾಳಿ ಹಾಗೇ ಯಾವುದೇ ಗಂಭೀರವಾದ ಘಟನೆ ನಡೆದರೂ ಈ ಕುಟುಂಬ ಮಾತ್ರ ಯಾವುದಕ್ಕೂ ಕ್ಯಾರೇ ಅನ್ನಲ್ಲ. ಕೇವಲ ಮನರಂಜನೆಯನ್ನು ಮಾತ್ರ ಈ ಕುಟುಂಬ ಬಯಸುತ್ತದೆ ಎಂದು ರಾಹುಲ್ ಗಾಂಧಿ ಕುಟುಂಬದ ವಿರುದ್ಧ ಅರೋಪಿಸಿದ್ದಾರೆ.

Advertisement

ಸದ್ಯ ಈ ಡ್ಯಾನ್ಸ್ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement