ನವದೆಹಲಿ: ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಗೊಂಡ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ 140 ಕೋಟಿ ಮಹಾಜನತೆಗೆ ಧನ್ಯವಾದಗಳನ್ನು ತಿಳಿಸುವೆ ಎಂದಿದ್ದಾರೆ. ನೂತನ ಮಸೂದೆ ಅಂಗೀಕಾರವಾದ ಕೆಲವೇ ಗಂಟೆಗಳಲ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ ಅವರು, ಬಹುದಿನಗಳ ಬೇಡಿಕೆಯಾಗಿದ್ದ ನಾರಿ ಶಕ್ತಿ ಮಸೂದೆ ಅಂಗೀಕಾರವಾಗಿರೋದು ದೇಶದ ಸಂಸದೀಯ ಪಯಣದಲ್ಲಿ ಇದೊಂದು ಸುವರ್ಣ ಕ್ಷಣವಾಗಿದೆ ಅಂತಾ ಬಣ್ಣಿಸಿದ್ದಾರೆ. ಮಹಿಳಾ ಮೀಸಲಾತಿ ಮಸೂದೆ ಕೇವಲ ನನ್ನೊಬ್ಬನಿಂದ ಆದುದಲ್ಲ. ಬದಲಾಗಿ ನಮ್ಮ ಪಕ್ಷಕ್ಕೆ ಮತ ನೀಡಿದ ಪ್ರತಿಯೊಬ್ಬ ವ್ಯಕ್ತಿಯೂ ಇದಕ್ಕೆ ಕಾರಣೀಭೂತರಾದಂತೆ ಎಂದು ನಾನು ಭಾವಿಸುವೆ ಎಂದು ವಿನಮ್ರವಾಗಿ ಹೇಳಿದ್ದಾರೆ. ಇನ್ನು, ಪ್ರಧಾನಿ ಅವರ ದಿಟ್ಟ ನಿಲುವಿನಿಂದಾಗಿ ದೇಶದ ಮಹಿಳೆಗೆ ರಾಜಕೀಯ ಸೇರಿದಂತೆ ಮತ್ತಿತರ ವಲಯಗಳಲ್ಲೂ ಬಲ ಬಂದಿದ್ದು ಅದಕ್ಕಾಗಿ ಪ್ರಧಾನಿಯವರನ್ನು ಅಭಿನಂದಿಸುತ್ತೇವೆ ಅಂತಾ ದೆಹಲಿಯಲ್ಲಿ ಮಹಿಳಾ ಸಚಿವರು, ಸಂಸದೆಯರು ಹರ್ಷ ವ್ಯಕ್ತಪಡಿಸಿದ್ದಾರೆ.