ಚಿತ್ರದುರ್ಗ : ಪಹಲ್ಗಾಮ್ನಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿ 26 ಮಂದಿ ಅಮಾಯಕರನ್ನು ಹತ್ಯೆಗೈದಿರುವುದಕ್ಕೆ ಪ್ರತೀಕಾರವಾಗಿ ನಮ್ಮ ದೇಶದ ಸೈನಿಕರು ಉಗ್ರರ ತಂಗುದಾಣಗಳನ್ನು ನಾಶಪಡಿಸಿದ್ದು, ಭಯೋತ್ಪಾದಕರನ್ನು ಸದೆ ಬಡಿಯಲಿ ಎಂದು ಮುಸ್ಲಿಂರು ಬಡಾಮಕಾನ್ನ ದರ್ಗಾದಲ್ಲಿ ಶನಿವಾರ ಪ್ರಾರ್ಥನೆ ಸಲ್ಲಿಸಿದರು.
ಸೈಯದ್ ಮೊಹಿದ್ದೀನ್(ಚೋಟು) ಮಾತನಾಡಿ ಭಾರತದ ಯೋಧರಿಗೆ ಉಗ್ರರನ್ನು ಸದೆಬಡಿಯುವಂತ ಶಕ್ತಿ ಕೊಡಲಿ. ಭಾರತದಲ್ಲಿ ಹುಟ್ಟಿ ಇಲ್ಲಿನ ಅನ್ನ, ನೀರು, ಗಾಳಿ ಸೇವಿಸುತ್ತಿರುವ ನಾವುಗಳು ಇಂತಹ ಸಂದರ್ಭದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ದರಿದ್ದೇವೆ. ಬೇರೆ ಧರ್ಮವನ್ನು ಪ್ರೀತಿಸುವುದು ಇಸ್ಲಾಂ ಧರ್ಮದ ಧ್ಯೇಯ. ಉಗ್ರಗಾಮಿಗಳು ಇಸ್ಲಾಂಮಿಗಳಲ್ಲ. ಮಾನವ ಕುಲಕ್ಕೆ ಕಂಟಕವಾಗಿರುವ ಉಗ್ರರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ನಮ್ಮ ದೇಶದ ಪ್ರಧಾನಿ ಮೋದಿರವರು ಸಿಂಧೂರ ಆಪರೇಷನ್ನಿಂದ ಹಿಂದೆ ಸರಿಯಬಾರದು. ಭಾರತವನ್ನು ಕೆಣಕಿದ ವಿರೋಧಿ ದೇಶ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕೆಂದರು.
ಧರ್ಮಗುರುಗಳಾದ ಸೈಯದ್ ಶಬ್ಬೀರ್ ಅಶ್ರಫಿ, ತಬ್ರೇಜ್, ಸೈಯದ್ ನೂರ್ ಅಹಮದ್, ಮಹಮದ್ ಯಾಸಿನ್, ಮಹ್ಮದ್ ಸಮೀ, ಸೈಯದ್ ಅಜರ್, ವಸೀಂ
ಉಸ್ಮಾನ್, ಭಾಷ, ಜಬೀವುಲ್ಲಾ, ಮುಜ್ಜು, ಫಹಾದ್, ಶಂಷುದ್ದಿನ್, ಫರ್ಮಾನ್ ಇನ್ನು ಅನೇಕರು ಪ್ರಾರ್ಥನೆಯಲ್ಲಿದ್ದರು.