ದೊರೆಗಳ ತೆಲಂಗಾಣದಿಂದ ಪ್ರಜೆಗಳ ತೆಲಂಗಾಣವನ್ನಾಗಿ ಪರಿವರ್ತಿಸಬೇಕು ಮತದಾರರಲ್ಲಿ ಸೋನಿಯಾ ಗಾಂಧಿ ಮನವಿ

ನವದೆಹಲಿ:ತೆಲಂಗಾಣ ವಿಧಾನಸಭಾ ಚುನಾವಣೆ ಹಿನ್ನಲೆ ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಮಂಗಳವಾರ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಬದಲಾವಣೆಯನ್ನು ತರಲು ರಾಜ್ಯದ ಮತದಾರರಿಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮನವಿ ಮಾಡಿದರು.

ಈ ಕುರಿತು ಟ್ವೀಟ್ ಮಾಡಿರುವ ಅವರು, ಎರಡು ನಿಮಿಷಗಳ ವಿಡಿಯೋ ಸಂದೇಶದಲ್ಲಿ, ‘ನಮಸ್ಕಾರಂ, ತೆಲಂಗಾಣದ ನನ್ನ ಪ್ರೀತಿಯ ಸಹೋದರಿಯರು ಮತ್ತು ಸಹೋದರರೇ, ನಾನು ನಿಮ್ಮೆಲ್ಲರ ನಡುವೆ ಬರಲು ಸಾಧ್ಯವಾಗಲಿಲ್ಲ ಆದರೆ ನಾನು ನಿಮ್ಮ ಹೃದಯಕ್ಕೆ ತುಂಬಾ ಹತ್ತಿರದಲ್ಲಿದ್ದೇನೆ. ಇಂದು ನಾನು ನಿಮಗೆ ಒಂದು ವಿಷಯವನ್ನು ಹೇಳಲು ಬಯಸುತ್ತೇನೆ. ನಾನು ತೆಲಂಗಾಣದ ಹುತಾತ್ಮ ಪುತ್ರರ ತಾಯಿಯರ ಕನಸನ್ನು ನನಸಾಗಿಸಲು ಬಯಸುತ್ತೇನೆ’ ಎಂದಿದ್ದಾರೆ.

ನಾವೆಲ್ಲರೂ ‘ದೊರಲ’ ತೆಲಂಗಾಣವನ್ನು ‘ಪ್ರಜಲ’ ತೆಲಂಗಾಣವನ್ನಾಗಿ (ದೊರೆಗಳ ತೆಲಂಗಾಣದಿಂದ ಪ್ರಜೆಗಳ ತೆಲಂಗಾಣವನ್ನಾಗಿ) ಪರಿವರ್ತಿಸಬೇಕೆಂದು ನಾನು ಪ್ರಾಮಾಣಿಕವಾಗಿ ಬಯಸುತ್ತೇನೆ. ನಿಮ್ಮ ಕನಸುಗಳನ್ನು ನನಸು ಮಾಡಲು ಮತ್ತು ನಿಮಗೆ ನಿಜವಾದ ಮತ್ತು ಪ್ರಾಮಾಣಿಕ ಸರ್ಕಾರವನ್ನು ನೀಡಲು ಅವಕಾಶ ನೀಡಿ ಎಂದು ಅವರು ಹೇಳಿದರು.

Advertisement

ಬಿಆರ್‌ಎಸ್ ಅಧಿಕಾರದಲ್ಲಿರುವ ದಕ್ಷಿಣ ರಾಜ್ಯದಲ್ಲಿ ಪ್ರಚಾರದ ಕೊನೆಯ ದಿನ ಸೋನಿಯಾ ಮತ ಯಾಚನೆ ಮಾಡಿದ್ದಾರೆ. ಸೋನಿಯಾ ಅಮ್ಮಾ ಎಂದು ಕರೆಯುವ ಮೂಲಕ ನೀವು ನನಗೆ ಅಪಾರ ಗೌರವವನ್ನು ನೀಡಿದ್ದೀರಿ. ನೀವು ನನ್ನನ್ನು ತಾಯಿಯಂತೆ ನೋಡಿದ್ದೀರಿ. ಈ ಪ್ರೀತಿ ಮತ್ತು ಗೌರವಕ್ಕೆ ನಾನು ನಿಮಗೆ ಯಾವಾಗಲೂ ಕೃತಜ್ಞಳಾಗಿರುತ್ತೇನೆ ಮತ್ತು ಎಂದೆಂದಿಗೂ ನಿಮಗೆ ಸಮರ್ಪಿತವಾಗಿರುತ್ತೇನೆ’ ಎಂದು ಅವರು ಹೇಳಿದರು.

ತೆಲಂಗಾಣದ ನಮ್ಮ ಸಹೋದರಿಯರು, ತಾಯಂದಿರು, ಪುತ್ರರು, ಪುತ್ರಿಯರು ಮತ್ತು ಸಹೋದರರು ಈ ಬಾರಿ ಬದಲಾವಣೆಯನ್ನು ತರಲು ತಮ್ಮೆಲ್ಲಾ ಶಕ್ತಿಯನ್ನು ಬಳಸಬೇಕೆಂದು ನಾನು ವಿನಂತಿಸುತ್ತೇನೆ. ಕಾಂಗ್ರೆಸ್‌ಗೆ ಮತ ನೀಡಿ. ‘ಮರ್ಪು ಕಾವಾಲಿ – ಕಾಂಗ್ರೆಸ್ ರಾವಾಲಿ’ ಎಂದು ಸೋನಿಯಾ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ತೆಲಂಗಾಣದವರೇ ಆದ ‘ಸೋನಿಯಾ ಅಮ್ಮಾ’ ಅವರಿಂದ ರಾಜ್ಯದ ಜನತೆಗೆ ಸಂದೇಶ’ ಎಂದು ಸೋನಿಯಾ ಗಾಂಧಿ ವಿಡಿಯೋ ಸಂದೇಶವನ್ನು ಹಂಚಿಕೊಂಡಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement