ದ.ಕ, ಉಡುಪಿ ಜಿಲ್ಲೆಯಲ್ಲಿ 55 ಸರಕಾರಿ ಶಾಲೆಗಳಲ್ಲಿ 1ನೇ ತರಗತಿಗೆ ಶೂನ್ಯ ದಾಖಲಾತಿ.!

ಮಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ 55 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ 1ನೇ ತರಗತಿಗೆ ಇದುವರೆಗೂ ಒಬ್ಬ ವಿದ್ಯಾರ್ಥಿಯೂ ದಾಖಲಾತಿಯಾಗಿಲ್ಲ. ಜೂನ್‌ 30 ರವರೆಗಿನ ಅಂಕಿಅಂಶಗಳು ನೋಡಿದಾಗ ಅಘಾತಕಾರಿ ಅಂಶವನ್ನು ದೃಢಪಡಿಸಿವೆ.

ಎರಡು ಜಿಲ್ಲೆಗಳ 55 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿನ ಒಂದನೇ ತರಗತಿಗೆ ಶೂನ್ಯ ದಾಖಲಾತಿಯಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.

ದಕ್ಷಿಣ ಕನ್ನಡದ 24 ಶಾಲೆಗಳಲ್ಲಿ ಒಂದನೇ ತರಗತಿಗೆ ಶೂನ್ಯ ದಾಖಲಾತಿ ದಾಖಲಾಗಿದೆ. ಇದರಲ್ಲಿ ಪುತ್ತೂರು ತಾಲೂಕಿನ 2, ಬಂಟ್ವಾಳದ 4, ಬೆಳ್ತಂಗಡಿಯಲ್ಲಿ 3, ಮಂಗಳೂರು ಉತ್ತರದಲ್ಲಿ 2, ಮಂಗಳೂರು ದಕ್ಷಿಣದಲ್ಲಿ 2, ಮೂಡುಬಿದಿರೆ 3 ಮತ್ತು ಸುಳ್ಯ ತಾಲೂಕಿನ 8 ಶಾಲೆಗಳಿಗೆ ಮಕ್ಕಳ ದಾಖಲಾತಿ ಸಂಖ್ಯೆ ಶೂನ್ಯವಾಗಿದೆ. ಅದೇ ರೀತಿ ಉಡುಪಿ ಜಿಲ್ಲೆಯಲ್ಲಿ 31 ಶಾಲೆಗಳಲ್ಲಿ ಒಂದನೇ ತರಗತಿಗೆ ಶೂನ್ಯ ದಾಖಲಾತಿ ಇದೆ. ಉಡುಪಿಯಲ್ಲಿ 4, ಬ್ರಹ್ಮಾವರದಲ್ಲಿ 4, ಕುಂದಾಪುರದಲ್ಲಿ 5, ಬೈಂದೂರಿನಲ್ಲಿ 9, ಮತ್ತು ಕಾರ್ಕಳ ತಾಲೂಕಿನ೯ ಶಾಲೆಗಳು ಸೇರಿವೆ.

Advertisement

ನಿಶ್ಚಿತಾರ್ಥ ರದ್ದು: ಯುವತಿಯನ್ನು ಚಾಕುವಿನಿಂದ ಇರಿದು ಕೊಲೆಗೈದ ಪಾಗಲ್ ಪ್ರೇಮಿ

ದಕ್ಷಿಣ ಕನ್ನಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್ ದಯಾನಂದ ಮಾತನಾಡಿ, ಪ್ರವೇಶಕ್ಕೆ ಇನ್ನೂ ಸಮಯವಿದ್ದು, ಮಕ್ಕಳು ಶಾಲೆಗಳಿಗೆ ಸೇರುವ ಸಾಧ್ಯತೆಯಿದೆ. ಗ್ರೇಡ್‌ವಾರು ಡೇಟಾ ಕ್ರೋಢೀಕರಣ ಪ್ರಕ್ರಿಯೆಯು ನಡೆಯುತ್ತಿದೆ ಎಂದರು.

ಉಡುಪಿ ಡಿಡಿಪಿಐ ಬಿ.ಗಣಪತಿ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಪರಿಸರ ಪೂರಕವಾಗಿದೆ. ಈ ಸತ್ಯವನ್ನು ಪಾಲಕರು ಅರಿತುಕೊಳ್ಳಬೇಕು. ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಆಯಾ ಗ್ರಾಮಗಳಲ್ಲಿರುವ ಶಾಲೆಗಳಿಗೆ ಕಳುಹಿಸಿ ಶಾಲೆಯನ್ನು ಸಂರಕ್ಷಿಸಬೇಕು.

ಮಕ್ಕಳು ಸರ್ಕಾರಿ ಶಾಲೆಗಳಿಗೆ ಆದ್ಯತೆ ನೀಡದಿರಲು ಆಂಗ್ಲ ಮಾಧ್ಯಮ ಶಾಲೆಗಳ ಪ್ರಭಾವವೇ ಪ್ರಮುಖ ಕಾರಣ. ಆಂಗ್ಲ ಮಾಧ್ಯಮ ಶಾಲೆಗಳು ಇತರ ಸೌಲಭ್ಯಗಳ ಜೊತೆಗೆ ವಿದ್ಯಾರ್ಥಿಗಳಿಗೆ ಅವರ ಮನೆ ಬಾಗಿಲಿಗೆ ಬಸ್ ಸೇವೆಯನ್ನು ಒದಗಿಸುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲು ಯಾವುದೇ ಒಲವು ತೋರಿಸುತ್ತಿಲ್ಲ ಎಂದರು

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement