ಬೆಂಗಳೂರು: ಜನನಿ ಧಾರಾವಾಹಿ ನಟಿ ವೀಣಾ, 25 ವರ್ಷದ ಮದನ್ ಎಂಬಾತನನ್ನು ಪ್ರೀತಿ ಮಾಡುತ್ತಿದ್ದಳು.ಈ ಜೋಡಿ ಪಾರ್ಕ್, ಪಬ್, ಸಿನಿಮಾ ಅಂತೆಲ್ಲಾ ಸುತ್ತಾಡಿದ್ದಾರೆ.ಮದುವೆ ವಿಚಾರಕ್ಕೆ ಬಂದಾಗ ಮದನ್ ಸಾವಿನ ಮನೆ ಸೇರುವಂತೆ ಮಾಡಿಬಿಟ್ಟಿದೆ.
ಮದನ್ನ ಮನಸ್ಸಾರೆ ಇಷ್ಟ ಪಟ್ಟಿದ್ದ ವೀಣಾಳಿಗೆ ಬೇರೆ ಹುಡುಗರ ಪರಿಚಯವೂ ಇತ್ತು.. ಹೀಗಾಗಿ, ವೀಣಾ ಮೇಲೆ ಅನುಮಾನ ಪಟ್ಟಿದ್ದ ಮದನ್ ಮದುವೆಗೆ ಒಲ್ಲೆ ಅಂದಿದ್ದ.. ಬಳಿಕ ಕೋಪಗೊಂಡಿದ್ದ ವೀಣಾ ಒಮ್ಮೆ ಮದನ್ ಮನೆ ಮುಂದೆ ಹೋಗಿ ಕೈ ಕೊಯ್ದುಕೊಂಡು ಮನೆ ಮುಂದೆ ಬೀದಿ ರಂಪಾಟ ಮಾಡಿದ್ದಾಳೆ ಅನ್ನೋ ಮಾಹಿತಿ ಇದೆ.
ಗಲಾಟೆಯ ನಡುವೆಯೂ ಇವರಿಬ್ಬರ ಪ್ರೇಮಾಂಕುರಕ್ಕೇನು ಫುಲ್ ಸ್ಟಾಪ್ ಬಿದ್ದಿರ್ಲಿಲ್ಲ. ಆದ್ರೆ, ಈ ಮಧ್ಯೆಯೇ ಮದನ್ನ ಮದುವೆಯಾಗುವಂತೆ ವೀಣಾ ಹಿಂಸೆ ಕೊಡ್ತಾಯಿದ್ಳು ಅನ್ನೋ ಗುಮಾನಿ ಕೂಡ ಇದೆ. ಇನ್ನು ರಾತ್ರಿ ಹೊತ್ತಲ್ಲಿ ಮದನ್ಗೆ ಪಾರ್ಟಿ ಮಾಡೋಣ ಅಂತಾ ಕರೆದಿದ್ಳು. ಆದ್ರೆ, ನಗುನಗುತ್ತಲೇ ಶುರುವಾಗಿದ್ದ ಎಣ್ಣೆ ಪಾರ್ಟಿ, ಕೊನೆಗೆ ಮದನ್ ಮಸಣ ಸೇರಿಬಿಟ್ಟಿದ್ದ.
ಪಾರ್ಟಿ ಮಾಡೋಣ ಅಂತಾ ಮದನ್ನ ವೀಣಾ ಮನೆಗೆ ಕರೆದಿದ್ಳು. ಇಬ್ಬರು ರಾತ್ರಿ ಕಂಠ ಪೂರ್ತಿ ಕುಡಿದ್ದಿದ್ದಾರೆ. ಎಣ್ಣೆ ಕಿಕ್ಕೂ ನೆತ್ತಿಗೆ ಏರ್ತಾ ಏರ್ತಾ ಇದ್ದಂತೆ ಇಬ್ಬರ ಮಾತಿನ ವರಸೆ ಬದಲಾಗಿದೆ. ವರಸೆ ಬದಲಿಸಿದ್ದ ವೀಣಾ ಮದುವೆ ಮ್ಯಾಟ್ರೂ ತೆಗೆದಿದ್ದಾಳೆ.. ಸುಮಾರು 8.30ರ ವೇಳೆಗೆ ಇಬ್ಬರ ಮಧ್ಯೆ ಮದುವೆ ಪ್ರಸ್ತಾಪವಾಗಿದೆ.. ಜಗಳದ ಮಧ್ಯೆಯೇ ವಾಶ್ರೂಂಗೆ ಹೋಗ್ಬರ್ತೀನಿ ಅಂತಾ ಮದನ್ ಎದ್ದು ಹೋಗಿದ್ದಾನೆ.. ಆದ್ರೆ, ತುಂಬಾ ಹೊತ್ತಿನ ಬಳಿಕವಾದ್ರೂ ಮದನ್ ವಾಪಾಸ್ ಬಂದಿಲ್ಲ.. ಹೀಗಾಗಿ, ಏನಾಯ್ತು ಅಂತಾ ನೋಡಲು ಹೋದ ವೀಣಾ ಅಕ್ಷರಷಃ ಶಾಕ್ ಆಗಿದ್ದಾಳೆ. ಯಾಕಂದ್ರೆ, ಆತನ ದೇಹ ಫ್ಯಾನ್ನಲ್ಲಿ ನೇತಾಡ್ತಿತ್ತು.
ಅತ್ತ, ವೀಣಾ ಮದನ್ ಸ್ನೇಹಿತನನ್ನ ಪ್ರೀತಿ ಮಾಡ್ತಿದ್ದು, ಹೀಗಿದ್ರು ಮದನ್ನ್ನ ಪ್ರೀತಿ ಮಾಡುವಂತೆ ಒತ್ತಾಯಿಸಿದ್ಳಂತೆ. ಮದನ್ ಇಷ್ಟ ಇಲ್ಲ ಅಂದ್ರ ಮನೆ ಹತ್ತಿರ ಬಂದು ಗಲಾಟೆ ಮಾಡ್ತಿದ್ದಳು ಅಂತ ಮದನ್ ತಾಯಿ ಆರೋಪಿಸಿದ್ದಾರೆ.
ವೀಣಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿರೋದಾಗಿ ಹುಳಿಮಾವು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ವೀಣಾಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.