ಸುಖ್ಯಾ : ನಕ್ಸಲರು ಅಡಗಿಸಿಟ್ಟಿದ್ದ ಭಾರೀ ಪ್ರಮಾಣದ ಸ್ಫೋಟಕವನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದ ಘಟನೆ ಛತ್ತೀಸಗಢದ ಸುಖ್ಯಾ ಜಿಲ್ಲೆಯಲ್ಲಿ ನಡೆದಿದೆ.
ಸುಖ್ಯಾ ಜಿಲ್ಲೆಯ ಕಿಸ್ತರಾಮ್ ಪೊಲೀಸ್ ಠಾಣಾ ವ್ಯಾಪ್ತಿಯ ತೊಂಡಮಾರ್ಕ ಮತ್ತು ಡಬ್ಬಮಾರ್ಕ ಹಳ್ಳಿಗಳಲ್ಲಿ ಸ್ಫೋಟಕಗಳು ಪತ್ತೆಯಾಗಿವೆ. ಸಿಆರ್ ಪಿಎಫ್, ಕೋಬ್ರಾ ಹಾಗೂ ಬಸ್ತಾರ್ ಬೆಟಾಲಿಯನ್ ಜಂಟಿ ಕಾರ್ಯಾಚರಣೆ ನಡೆಸಿದ್ದು ಅಡಗಿಸಿಟ್ಟಿದ್ದ ಸ್ಫೋಟಕವನ್ನು ವಶಕ್ಕೆ ಪಡೆದಿದ್ದಾರೆ.
350 ಗ್ರಾಂ ಜಿಲೆಟಿನ್ ಸ್ಟಿಕ್ಸ್, 105 ಎಲೆಕ್ಟ್ರಿಕ್ ಡೆಟೊನೇಟರ್ಸ್, ಬ್ಯಾರೆಲ್ ಗ್ರೆನೇಡ್ ಲಾಚರ್, 22 ಬಿಜೆಎಲ್ ಪ್ರೊಜೆಕ್ಟರ್ ಗಳು, 19 ಬಿಜಿಎಲ್ ಬಾಂಬ್ ಗಳು, 5 ಕೆ.ಜಿ ತೂಕದ ಸುಧಾರಿತ ಸ್ಫೋಟಕ ಸಾಧನ, 30 ಕೆ.ಜಿ ಗನ್ ಪೌಡರ್ ಮತ್ತು ಮಾವೋವಾದಿಗಳ ಬರಹವಿರುವ ಪುಸ್ತಕಗಳನ್ನು ಭದ್ರತಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.