ನವದೆಹಲಿ;ಧನಿ ಫೋಗಟ್‌ನ ಚಾರ್ಕಿ ದಾದ್ರಿ ಗ್ರಾಮದ ಬಂಟು ಮತ್ತು ಅವರ ಪತ್ನಿ ಸಂತೋಷ್, ನಟಿ ಕತ್ರಿನಾ ಕೈಫ್‌ಗೆ ದೇವರಂತೆ ಪೂಜೆ ಸಲ್ಲಿಸುತ್ತಾರೆ.
ಕತ್ರಿನಾ ಕೈಫ್ ಅವರಿಗೆ ಹುಟ್ಟುಹಬ್ಬದಂದು ಅವರು ಕೇಕ್ ಕತ್ತರಿಸಿ ಲಡ್ಡು ವಿತರಿಸುತ್ತಾರೆ.ಕಳೆದ ಹತ್ತು ವರ್ಷಗಳಿಂದ ಈ ದಂಪತಿ ಕೈಫ್ ಅವರನ್ನು ಪೂಜಿಸುತ್ತಿದ್ದಾರೆ. ಅವರ ಏಕೈಕ ಕನಸು? ಕತ್ರಿನಾ ಕೈಫ್ ಅವರನ್ನು ಭೇಟಿ ಮಾಡುವುದಾಗಿದೆ.
ದಂಪತಿಗಳ ಮನೆಯ ಹೊರಭಾಗ ಮತ್ತು ಒಳಭಾಗದಲ್ಲಿ ಕತ್ರಿನಾ ಕೈಫ್ ಫೋಟೋಗಳೇ ತುಂಬಿಕೊಂಡಿವೆ. ಗ್ರಾಮಸ್ಥರಿಗೆ ಕೈಫ್ ಮೇಲಿನ ವ್ಯಾಮೋಹದ ಪರಿಣಾಮವಾಗಿ, ಸಂತೋಷ್ ಮತ್ತು ಬಂಟು ಅವರನ್ನು ಸ್ಥಳೀಯರು ಕತ್ರಿನಾ ಕೈಫ್ ಎಂದು ಕರೆಯುತ್ತಾರೆ.
2004ರಲ್ಲಿ ಕತ್ರಿನಾ ಕೈಫ್ ಅವರ ಚಲನಚಿತ್ರವನ್ನು ಮೊದಲ ಬಾರಿಗೆ ಅವರ ಹಳ್ಳಿಯ ಮುಖ್ಯಸ್ಥರೂ ಆಗಿರುವ ಬಂಟು ಅವರು ನೋಡಿದಾಗ, ಅವರು ನಟಿಯ ಬಗ್ಗೆ ಆರಾಧನೆ ಬೆಳೆಸಿಕೊಂಡರು. ಒಂದು ದಿನ ತನ್ನ ಇಷ್ಟ ದೇವತೆಯನ್ನು ಭೇಟಿಯಾಗಬೇಕೆಂಬ ಕನಸನ್ನು ಬಂಟು ಪೋಷಿಸುತ್ತಿದ್ದಾರೆ.
ಮದುವೆಯಾಗುವ ಮೊದಲು, ಬಂಟು ಕತ್ರಿನಾ ಕೈಫ್ ಚಿತ್ರಗಳನ್ನು ತನ್ನ ರೂಮಿನಲ್ಲಿ ನೇತುಹಾಕಿದ್ದರು. ಇದು ಅವರ ಕುಟುಂಬದ ಕೋಪವನ್ನು ತರಿಸಿತ್ತು. ಆದರೂ ಕಡೆಗೆ ಬಂಟೂ ಅವರ ನಟಿಯ ಮೇಲಿನ ಭಕ್ತಿಯನ್ನು ಒಪ್ಪಿಕೊಂಡಿದ್ದಾರೆ
ತಮ್ಮ ಮದುವೆಯಾದಾಗಿನಿಂದ ಬಂಟೂ ದಂಪತಿಗಳು ನಟಿಯ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಈ ವರ್ಷವೂ ಬಂಟು ಕತ್ರಿನಾ ಕೈಫ್ ಅವರ ಜನ್ಮದಿನವನ್ನು ತಮ್ಮ ಪತ್ನಿ ಮತ್ತು ಮಗಳ ಜೊತೆಗೆ ಬಹಳ ಸಡಗರದಿಂದ ಆಚರಿಸಿದರು.
ಬಂಟು ಅವರ ಪತ್ನಿ ಸಂತೋಷ್ ಅವರು ಮದುವೆಯಾದಾಗ, ಮೊದಲಿಗೆ ಕತ್ರಿನಾ ಕೈಫ್ರನ್ನು ತನ್ನ ಆರಾಧ್ಯ ದೈವವಾಗಿ ಪರಿಗಣಿಸಿದ್ದನ್ನು ಕಂಡು ಆಘಾತಕ್ಕೊಳಗಾಗಿದ್ದರು.ಬಳಿಕ ಅವರು ಪತಿಯ ವಿಚಾರ ತಿಳಿದು ಅವರು ಕೂಡ ಕತ್ರಿನಾಗೆ ಆರಾಧನೆ ಮಾಡುತ್ತಾರೆ.