ಉತ್ತರ ಪ್ರದೇಶ: ಅಸಭ್ಯ ಕಾಮೆಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಹಾಗೂ ಉತ್ತರಪ್ರದೇಶದ ರಾಂಪುರದ ಮಾಜಿ ಸಂಸದೆ ಜಯಪ್ರದಾ ಅವರಿಗೆ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.
ಈ ಪ್ರಕರಣದ ಬಗ್ಗೆ ನಟಿ ತಮ್ಮ ಹೇಳಿಕೆ ನೀಡುವಂತೆ ತಿಳಿಸಲಾಗಿತ್ತು. ಆದರೆ ಅವರು ಬುಧವಾರ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.
ಹೀಗಾಗಿ ಉತ್ತರ ಪ್ರದೇಶದ ನ್ಯಾಯಾಲಯವೊಂದು ನೋಟಿಸ್ ನೀಡಿದೆ. ಡಿಸೆಂಬರ್ 20ರಂದು ಈ ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಮೋಹನ್ ಲಾಲ್ ವಿಷ್ಟೋಯ್ ತಿಳಿಸಿದ್ದಾರೆ.