ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಬ್ರೇಕಪ್ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಸಂಬಂಧ ಮುರಿದುಬಿದ್ದಾಗ ಹುಡುಗರಿಗಿಂತ ಹುಡುಗಿಯರಿಗೇ ಹೆಚ್ಚು ನೋವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹುಡುಗರು ಮಾತ್ರ ನೋವು ಅನುಭವಿಸುತ್ತಾರೆ ಎಂಬ ವಾದವನ್ನು ರಶ್ಮಿಕಾ ನಿರಾಕರಿಸಿದ್ದಾರೆ. ನೋವನ್ನು ವ್ಯಕ್ತಪಡಿಸಲು ಹುಡುಗಿಯರು ಗಡ್ಡ ಬಿಡಲು ಅಥವಾ ಕುಡಿಯಲು ಸಾಧ್ಯವಿಲ್ಲ. ಆದರೆ, ಹುಡುಗಿಯರು ತಮ್ಮ ನೋವನ್ನು ಒಳಗೊಳಗೆ ಅನುಭವಿಸುತ್ತಾರೆ ಹಾಗೂ ಅದನ್ನು ಹೊರಗೆ ತೋರಿಸುವುದಿಲ್ಲ ಎಂದು ಹೇಳಿದ್ದಾರೆ.!