ಬೆಂಗಳೂರು: ಸಪ್ತ ಸಾಗರದಾಚೆ ಎಲ್ಲೋ‘ ಸಿನಿಮಾದ ಬಳಿಕ ನಟಿ ರುಕ್ಮಿಣಿ ವಸಂತ್ ಕರ್ನಾಟಕದ ಹೊಸ ಕ್ರಶ್ ಹುಟ್ಟಿಕೊಂಡಿದ್ದಾರೆ.
ಅವರ ಸರಳವಾದ ಸೌಂದರ್ಯ, ಸಂಯಮದ ನಟನೆಗೆ ಕನ್ನಡ ಪ್ರೇಕ್ಷಕರು ಫಿದಾ ಆಗಿದ್ದಾರೆ. ಅನೇಕ ಹುಡುಗರು, ರುಕ್ಮಿಣಿ ವಸಂತ್ರ ಚಿತ್ರಗಳನ್ನು ಮೊಬೈಲ್ ವಾಲ್ಪೇಪರ್,ಪ್ರೊಫೈಲ್ ಪಿಕ್ಚರ್ಗಳನ್ನಾಗಿ ಮಾಡಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ರುಕ್ಮಿಣಿ ಅವರ ಚಿತ್ರವೊಂದು ವೈರಲ್ ಆಗಿತ್ತು, ಆ ಚಿತ್ರದಲ್ಲಿ ಯುವಕನೊಬ್ಬನೊಟ್ಟಿಗೆ ರುಕ್ಮಿಣಿ ಆತ್ಮೀವಾಗಿ ಕಂಡಿದ್ದರು. ಆತ ರುಕ್ಮಿಣಿಯವರ ಬಾಯ್ಫ್ರೆಂಡ್ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ರುಕ್ಮಿಣಿ ವಸಂತ್ಗೆ ಬಾಯ್ಫ್ರೆಂಡ್ ಇದ್ದಾನೆ ಎಂಬ ಸುದ್ದಿಗೆ ಸ್ವತಃ ರುಕ್ಮಿಣಿ ವಸಂತ್ ಪ್ರತಿಕ್ರಿಯಿಸಿದ್ದಾರೆ. ವೈರಲ್ ಆಗಿರುವ ಚಿತ್ರದಲ್ಲಿರುವುದು ನನ್ನ ಗೆಳೆಯ, ನಾನು ಇನ್ನೂ ಸಿಂಗಲ್ ಎಂದು ಸ್ಪಷ್ಟನೆ ನೀಡಿದ್ದಾರೆ.
ಚಿತ್ರರಂಗಕ್ಕೆ ಹೊಸಬಳಾಗಿದ್ದರೂ ನನ್ನ ಸಿನಿಮಾಗಳ ಬಗ್ಗೆ, ನನ್ನ ಖಾಸಗಿ ಜೀವನದ ಬಗ್ಗೆ ಜನ ಕಾಳಾಜಿ ಮಾಡುತ್ತಿರುವುದು ಖುಷಿ ಆಗುತ್ತಿದೆ. ಇದೇ ಸಮಯದಲ್ಲಿ ಸುಳ್ಳು ಸುದ್ದಿಗಳು, ನೆಗೆಟಿವ್ ಕಮೆಂಟ್ಗಳು ಬೇಸರವನ್ನು ತರಿಸುತ್ತವೆ ಎಂದು ಹೇಳಿದ್ದಾರೆ. ಆದರೆ ಇಷ್ಟೋಂದು ಜನ ಪಾಸಿಟಿವ್ ಆಗಿ ಪೋಸ್ಟ್ ಹಾಕುತ್ತಿರುವಾಗ ಒಬ್ಬರ ನೆಗೆಟಿವ್ ಕಮೆಂಟ್ ಬಗ್ಗೆ ಹೆಚ್ಚು ತೆಲೆಕೆಡಿಸಿಕೊಳ್ಳಬಾರದು ಎಂದಿದ್ದಾರೆ.