ಮಲಯಾಳಂನ ಸೂಪರ್ ಹಿಟ್ ಚಿತ್ರ ‘ಪ್ರೇಮಂ’ ಮೂಲಕ ಬಣ್ಣದ ಬದುಕು ಆರಂಭಿಸಿದವರು ಸಾಯಿ ಪಲ್ಲವಿ. ಈ ಚಿತ್ರದಲ್ಲಿ ಸೀರೆ ಉಟ್ಟೇ ಗಮನ ಸೆಳೆದರು. ಆ ಬಳಿಕ ಅವರನ್ನು ಇದೇ ರೀತಿಯ ಆಫರ್ಗಳು ಹುಡುಕಿ ಬಂದವು. ತೆರೆ ಹಿಂದೆಯೂ ಅವರು ಸೀರೆಯನ್ನೇ ಉಡುತ್ತಾರೆ. ಇದಕ್ಕೆ ಕಾರಣವನ್ನು ಅವರು ವಿವರಿಸಿದ್ದಾರೆ.
ನಟಿ ಸಾಯಿ ಪಲ್ಲವಿ ಅವರು ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಅವರು ಎಲ್ಲಿಯೂ ಬಿಕಿನಿ ಧರಿಸಿಲ್ಲ. ತುಂಡುಡುಗೆ ಪ್ರದರ್ಶನ ಮಾಡಿಲ್ಲ. ಯಾವಾಗಲೂ ಸಾಂಪ್ರದಾಯಿಕ ಬಟ್ಟೆ ಮೂಲಕವೇ ಗಮನ ಸೆಳೆಯುತ್ತಾರೆ. ಹಾಗಾದರೆ ಸಾಯಿ ತುಂಡುಡುಗೆ ಏಕೆ ಧರಿಸಲ್ಲ? ಈ ಬಗ್ಗೆ ಅವರು ಮಾತನಾಡಿದ್ದಾರೆ. ಇದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ.
‘ನಾನು ಗಾರ್ಜಿಯಾದಲ್ಲಿ ಅಭ್ಯಾಸ ಮಾಡುತ್ತಿದೆ. ಆಗ ಟ್ಯಾಂಗೋ ಕಲಿತೆ. ಇದಕ್ಕೆ ಸಣ್ಣ ಬಟ್ಟೆ ತೊಡಬೇಕಿತ್ತು. ನಾನು ನನ್ನ ಪಾಲಕರಿಂದ ಒಪ್ಪಿಗೆ ಪಡೆದೆ. ಇದಕ್ಕೆ ಅವರು ಓಕೆ ಎಂದರು. ನಂತರ ನನ್ನ ನಟನೆಯ ಪ್ರೇಮಂ ರಿಲೀಸ್ ಆಯಿತು. ನನ್ನ ಪಾತ್ರಕ್ಕೆ ಮೆಚ್ಚುಗೆ ಸಿಕ್ಕಿತು. ಆ ಬಳಿಕ ನನ್ನ ಟ್ಯಾಂಗೋ ಡ್ರೆಸ್ ವೈರಲ್ ಆಯಿತು. ಈ ವೇಳೆ ಜನರು ನನ್ನ ಡ್ರೆಸ್ ಬಗ್ಗೆ ಕಮೆಂಟ್ ಮಾಡಲಾರಂಭಿಸಿದರು .ನನಗೆ ಅನ್ ಕಂಫರ್ಟೆಬಲ್ ಎಂದು ಅನಿಸಿತು’ ಎಂದಿದ್ದಾರೆ ಅವರು. ‘ಆ ಘಟನೆ ಬಳಿಕ ನಾನು ಟ್ರೆಡಿಷನಲ್ ಆಗಿರಲು ಇಷ್ಟಪಟ್ಟೆ. ಏನೋ ಒಂದನ್ನು ಮಾಡಿ ನಂತರ ಕೊರಗೋದಕ್ಕೆ ನನಗೆ ಇಷ್ಟ ಇಲ್ಲ. ಬಟ್ಟೆಯನ್ನು ನೋಡಿ ಒಂದು ವ್ಯಕ್ತಿಯನ್ನು ಜಡ್ಜ್ ಮಾಡೋದು ಸರಿ ಅಲ್ಲ. ನಾನೇನು ಧರಿಸುತ್ತೇನೆ ಎಂಬುದು ನನ್ನ ವ್ಯಕ್ತಿತ್ವನ್ನು ತೋರಿಸುವುದಿಲ್ಲ’ ಎಂದಿದ್ದಾರೆ ಅವರು.
ಸಾಯಿ ಪಲ್ಲವಿ ಅವರು ಸೂಪರ್ ಆಫರ್ ಪಡೆದಿದ್ದಾರೆ. ಹಿಂದಿಯ ‘ರಾಮಾಯಣ’ ಸಿನಿಮಾದಲ್ಲಿ ಸಾಯಿ ಪಲ್ಲವಿ ಸೀತೆ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾ ದೊಡ್ಡ ಬಜೆಟ್ನಲ್ಲಿ ಸಿದ್ಧವಾಗುತ್ತಿದೆ. ರಾಮನ ಪಾತ್ರಕ್ಕೆ ರಣಬೀರ್ ಕಪೂರ್ ನಟಿಸುತ್ತಿದ್ದಾರೆ. ಯಶ್ ಅವರು ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ.