ತಮಿಳು ನಟ ದಳಪತಿ ವಿಜಯ್ ಅವರು ಹೊಸದಾಗಿ ರಚಿಸಲಾದ ರಾಜಕೀಯ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ)ನ ಮೊದಲ ರಾಜ್ಯ ಸಮ್ಮೇಳನದಲ್ಲಿ ಭಾನುವಾರ ಸಾವಿರಾರು ಜನರು ಭಾಗವಹಿಸಿದ್ದರು.
ತಮಿಳುನಾಡಿನ ವಿಕ್ರವಾಂಡಿಯಲ್ಲಿ ನಡೆದ ಸಮಾವೇಶದಲ್ಲಿ ವಿಜಯ್ ಅವರು ಸ್ವಾತಂತ್ರ್ಯ ಹೋರಾಟಗಾರರಿಗೆ ಪುಷ್ಪ ನಮನ ಸಲ್ಲಿಸಿದರು ಮತ್ತು ಪಕ್ಷದ ಧ್ವಜಾರೋಹಣ ಮಾಡಿದರು. ‘ಪಿರಪ್ಪೊಕ್ಕುಂ ಎಲ್ಲ ಉಯಿರ್ಕುಂ’ ಅಥವಾ ‘ಹುಟ್ಟಿನಿಂದ ಎಲ್ಲ ಜೀವಗಳು ಸಮಾನ’ ಎಂಬುದಾಗಿ ಪಕ್ಷದ ಅಡಿಬರಹವನ್ನು ಅನಾವರಣಗೊಳಿಸಿದ ನಟ ವಿಜಯ್ ಅವರು, “ರಾಜಕೀಯ ಸಿನಿ ಕ್ಷೇತ್ರವಲ್ಲ, ಇದು ಯುದ್ಧಭೂಮಿ, ಇದು ಸ್ವಲ್ಪ ಗಂಭೀರವಾಗಿದೆ” ಎಂದು ಹೇಳಿದ್ದಾರೆ.