ಕ್ಯಾಲಿಫೋರ್ನಿಯಾ: ಜನಪ್ರಿಯ ಟಿವಿ ಶೋ ‘ಫ್ರೆಂಡ್ಸ್’ ಖ್ಯಾತಿಯ ನಟ ಮ್ಯಾಥ್ಯೂ ಪೆರ್ರಿ ಅಕ್ಟೋಬರ್ 28ರಂದು ಬಾತ್ಟಬ್ನಲ್ಲಿ ಮುಳುಗಿ ಮೃತಪಟ್ಟಿದ್ದರು. ಇವರ ಸಾವಿನ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಇದಕ್ಕೆಲ್ಲ ಈಗ ಉತ್ತರ ಸಿಕ್ಕಿದೆ. ಮ್ಯಾಥ್ಯು ಪೆರ್ರಿ ಅವರ ಸಾವಿಗೆ ಕೆಟಮೈನ್ ಅಂಶ ಕಾರಣವೆಂದು ಮರಣೋತ್ತರ ಪರೀಕ್ಷೆಯ ರಿಪೋರ್ಟ್ ನಲ್ಲಿ ವರದಿಯಾಗಿದೆ.
ಮ್ಯಾಥ್ಯೂ ಪೆರ್ರಿ ಅವರು ಅತಿಯಾಗಿ ಪೇನ್ ಕಿಲ್ಲರ್ ಸೇವಿಸುತ್ತಿದ್ದರು ಮತ್ತು ಮದ್ಯಪಾನ ಸೇವನೆ ಮಾಡುತ್ತಿದ್ದರು. ಇದರಿಂದ ಅವರ ಆರೋಗ್ಯದಲ್ಲಿ ಸಾಕಷ್ಟು ತೊಂದರೆ ಕಂಡು ಬಂತು. ಅನೇಕ ಬಾರಿ ಆರೋಗ್ಯದ ಸಮಸ್ಯೆ ಉಂಟಾಗಿ ಚಿಕಿತ್ಸೆಗಾಗಿ ಅವರು ಸಾಕಷ್ಟು ಹಣ ಖರ್ಚು ಮಾಡಿದ್ದರು. ಹಲವು ಬಾರಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಕಾದ ಸಂದರ್ಭ ಎದುರಾಗಿತ್ತು.
ಮ್ಯಾಥ್ಯೂ ಅವರು ಖಿನ್ನತೆಗೆ ಒಳಗಾಗಿದ್ದರಿಂದ ಅವರು ವಿಶೇಷ ಥೆರಪಿಗೆ ಒಳಗಾಗಿದ್ದರು ಎನ್ನಲಾಗಿದೆ. ಥೆರಪಿಯಲ್ಲಿ ಕೆಟಮೈನ್ನ ತೆಗೆದುಕೊಳ್ಳುವ ಥೆರಪಿ ಇದಾಗಿತ್ತು. ಖಿನ್ನತೆಗೆ ಒಳಗಾದ ವ್ಯಕ್ತಿಗಳನ್ನು ಟ್ರೀಟ್ ಮಾಡಲು ಇದನ್ನು ಬಳಕೆ ಮಾಡಲಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಆದರೆ, ಮ್ಯಾಥ್ಯೂ ಸಾಯುವ ಸಂದರ್ಭದಲ್ಲಿ ಕೆಟಮೈನ್ ಪ್ರಮಾಣ ಅವರ ದೇಹದಲ್ಲಿ ಅಧಿಕವಾಗಿತ್ತು. ಹೀಗಾಗಿ ಅವರು ನೀರಿನಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡಿದ್ದರಿಂದ ಮೇಲೆದ್ದು ಬರಲು ಅವರ ಬಳಿ ಸಾಧ್ಯವಾಗಲೇ ಇಲ್ಲ ಎನ್ನಲಾಗಿದೆ. ಇದರಿಂದ ಮ್ಯಾಥ್ಯೂ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.