ಬೆಂಗಳೂರು :ಕಿರುತೆರೆ ನಟ , ಸೋಶಿಯಲ್ ಮೀಡಿಯಾ ಸ್ಟಾರ್ ವರುಣ್ ಅರಾಧ್ಯ ವಿರುದ್ಧ ಎಫ್ಐಆರ್ ದಾಖಲಾದ ಸುದ್ದಿ ಹರಿದಾಡಿತ್ತು. ಬ್ಲಾಕ್ ಮೇಲ್ ಆರೋಪ ಕೇಳಿಬಂದಿತ್ತು. ಆದರೆ ಈಗ ವರ್ಷ ಕಾವೇರಿ ಇದು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.
ಎಲ್ಲಕಡೆ ವೈರಲ್ ಆಗಿರುವುದು ಸುಳ್ಳು ಸುದ್ದಿ. ನಾನು ಇನ್ಸ್ಟಾಗ್ರಾಮ್ ಪ್ರೊಫೈಲ್ ಮತ್ತು ಇತರ ಸಾಮಾಜಿಕ ಜಾಲತಾಣಗಳಿಂದ ರೀಲ್ಸ್ಗಳನ್ನು ತೆಗೆಯುವುದರ ಕುರಿತಾಗಿದೆ. ನಕಲಿ ಸುದ್ದಿಗಳನ್ನು ಹರಡುವುದನ್ನು ನಿಲ್ಲಿಸಿ. ಮೂರು ದಿನಗಳ ಕಾಲ ಕಾಯಿರಿ. ನಾನು ಕ್ಲ್ಯಾರಿಟಿಯೊಂದಿಗೆ ಬರುತ್ತೇನೆ ಎಂದು ಹೇಳಿದ್ದಾರೆ ವರ್ಷಾ ಕಾವೇರಿ ಹೇಳಿಕೆ ನೀಡಿದ್ದಾರೆ.
ವರುಣ್ ಆರಾಧ್ಯ ಹಾಗೂ ವರ್ಷ ಕಾವೇರಿ ಅವರು ಸೋಷಿಯಲ್ ಮೀಡಿಯಾದ ಫೇಮಸ್ ಜೋಡಿಯಾಗಿದ್ದರು. ನಂತರ ಕಾರಣಾಂತರಗಳಿಂದ ಬ್ರೇಕ್‌ಅಪ್ ಆಗಿತ್ತು. ಬಸವೇಶ್ವರನಗರ ಸೆನ್ ಪೊಲೀಸ್ ಠಾಣೆಯಲ್ಲಿ ಸದ್ಯ ವರುಣ್ ಆರಾಧ್ಯ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಸುದ್ದಿಯಾಗಿತ್ತು. ವರ್ಷಾ ಕಾವೇರಿಯಿಂದ ದೂರು ದಾಖಲಾಗಿರುವುದು ತಿಳಿದು ಬಂದಿತ್ತು. ಆದರೆ ಇದು ಸುಳ್ಳು ಮಾಹಿತಿ ಬ್ಲಾಕ್‌ಮೇಲ್ ಆರೋಪ ಅಲ್ಲ ಎಂದಿದ್ದಾರೆ ವರ್ಷಾ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.