ನಡ್ಡಾ, ನಿರ್ಮಲಾ ವಿರುದ್ಧ ಎಫ್‌ಐಆರ್‌ : ವಿಜಯೇಂದ್ರ, ನಳಿನ್‌ಗೂ ಪುಕ ಪುಕ

WhatsApp
Telegram
Facebook
Twitter
LinkedIn

ಬೆಂಗಳೂರು : ಚುನಾವಣಾ ಬಾಂಡ್ ಆರೋಪಕ್ಕೆ ಸಂಬಂಧಿಸಿದಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವಂತೆ ತಿಳಕ್‌ ನಗರ ಪೊಲೀಸರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಆದೇಶ ಹೊರಡಿಸಿದೆ. ಚುನಾವಣಾ ಬಾಂಡ್‌ಗಳ ಹೆಸರಿನಲ್ಲಿ ಉದ್ಯಮಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂದು ಆದರ್ಶ ಅಯ್ಯರ್‌ ಎಂಬ ವ್ಯಕ್ತಿ ತಿಲಕನಗರ ಠಾಣೆಗೆ ದೂರು ನೀಡದಾಗ ಪೊಲೀಸರು ದೂರು ಸ್ವೀಕರಿಸಲಿಲ್ಲ. ನ್ಯಾಯಾಲಯಕ್ಕೆ ಮೊರೆ ಹೋದಾಗ, ಕೋರ್ಟ್‌ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಸೂಚಿಸಿದೆ. ಹೌದು ಚುನಾವಣಾ ಬಾಂಡ್‌ ಮೂಲಕ ಇವರು ಸುಮಾರು 8000 ಕೋಟಿ ರೂ ಸುಲಿಗೆ ಮಾಡಿದ್ದಾರೆಂದು ಅರ್ಜಿದಾರ, ಜನಾಧಿಕಾರ ಸಂಘರ್ಷ ಪರಿಷತ್‌ ಸಹ ಅಧ್ಯಕ್ಷ ಆದರ್ಶ್‌ ಆಯ್ಯರ್‌ ಕೋರ್ಟಿಗೆ ದೂರು ನೀಡಿದ್ದರು. ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ಜೆ.ಪಿ. ನಡ್ಡಾ, ದಿಲ್ಲಿಯ ಇಡಿ ಅಧಿಕಾರಿಗಳು, ಆಗಿನ ಬಿಜೆಪಿ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲು, ಆಗಿನ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಭಾರತೀಯ ಜನತಾ ಪಾರ್ಟಿಯ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದೆ. ಹಣಕಾಸು ಸಚಿವರಾಗಿದ್ದ ನಿರ್ಮಲಾ ತಮ್ಮ ಸಾಂವಿಧಾನಿಕ ಹುದ್ದೆಯನ್ನು ಬಳಸಿ ಇ.ಡಿ. ಅಧಿಕಾರಿಗಳು ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ರಾಜ್ಯ ಮಟ್ಟದಲ್ಲಿ ಆಗಿನ ರಾಜ್ಯ ನಳಿನ್‌ ಕುಮಾರ್‌ ಕಟೀಲು ಮೂಲಕ ಹಣ ಸಂಗ್ರಹಿಸಿದ್ದಾರೆ. ಬಾಂಡ್‌ಗೆ ಹಣ ನೀಡದ ಕಂಪೆನಿಗಳ ವಿರುದ್ಧ ಇಡಿ ಮೂಲಕ ದಾಳಿ ನಡೆಸಲು ಸಚಿವರು ಪ್ರಚೋದಿಸಿದ್ದಾರೆ. ಇ.ಡಿ. ದಾಳಿಗೆ ಹೆದರಿ ಹಲವು ಕಾರ್ಪೊರೆಟ್‌ ಕಂಪೆನಿಗಳು ಕೋಟ್ಯಂತರ ಮೌಲ್ಯದ ಬಾಂಡ್‌ಗಳನ್ನು ಖರೀದಿಸಬೇಕಾಯಿತು ಎಂದು ದೂರಿನಲ್ಲಿ ಹೇಳಲಾಗಿದೆ. ಎಪ್ರಿಲ್‌ 2019, ಆಗಸ್ಟ್‌ 2022 ಹಾಗೂ 2023ರ ನವೆಂಬರ್‌ ಅವಧಿಯಲ್ಲಿ ವೇದಾಂತ ಮತ್ತು ಸ್ಟರಲೈಟ್‌ ಕಂಪನಿಗೆ ಬೆದರಿಕೆ ಹಾಕಿ ಸುಮಾರು 230 ಕೋಟಿ ರೂ ಬಾಂಡ್‌ ಖರೀದಿ ಮಾಡುವಂತೆ ಮಾಡಿದ್ದಾರೆ. ಹಾಗೆಯೇ ಅರಬಿಂದೋ ಫಾರ್ಮ ಕಂಪೆನಿಗೆ ಇಡಿ ಮೂಲಕ ದಾಳಿ ನಡೆಸಿ 49.5 ಕೋಟಿ ರೂಗಳನ್ನು ಸುಲಿಗೆ ಮಾಡಿದ್ದಾರೆ ಎಂದು ದೂರುದಾರರು ದೂರಿದ್ದಾರೆ. ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್‌ ತಿಲಕ್‌ನಗರ ಪೊಲೀಸರಿಗೆ ತನಿಖೆ ನಡೆಸಲು ಸೂಚಿಸಿ ವಿಚಾರಣೆಯನ್ನು ಅ.10ಕ್ಕೆ ಮುಂದೂಡಿದೆ.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon