ಜಗತ್ತಿ ದೈತ್ಯ ಉದ್ಯಮಿ ಎಲಾನ್ ಮಸ್ಕ್ ಅವರ ವಿಚ್ಛೇದಿತ ಪತ್ನಿಯ ಮಗಳು ವಿವಯನ್ ಜೆನ್ನಾ ವಿಲ್ಸನ್ ಅವರು ತಮ್ಮ ತಂದೆಯ ಮೇಲೆ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ನನ್ನ ತಂದೆ ಒಬ್ಬ ಮಹಾ ಸುಳ್ಳುಗಾರ. ಆತನಿಗೆ ಸುಳ್ಳು ಹೇಳೋದೇ ಕೆಲಸ. ಜೊತೆಗೆ ಆತ ಒಬ್ಬ ಸರಣಿ ವ್ಯಭಿಚಾರಿ. ಅವನಲ್ಲಿ ಯಾವುದೇ ಕ್ರೈಸ್ತ ಮೌಲ್ಯಗಳೇ ಇಲ್ಲ. ಎಲಾನ್ ಮಸ್ಕ್ ಮೋಸಗಾರ. ಎಲ್ಲೆಡೆ ತಾರತಮ್ಯ ಎಸಗಿದ ಆರೋಪಗಳನ್ನು ಎದುರಿಸುತ್ತಿದ್ದಾರೆ. ನನ್ನ ತಂದೆ ಧರ್ಮಾಂಧ ಕೂಡ ಹೌದು ಎಂದು ಜೆನ್ನಾ ವಿಲ್ಸನ್ ಆರೋಪಿಸಿದ್ದಾರೆ.
