ಬೆಂಗಳೂರು: ಯಾರಾದ್ರೂ ಶಾಸಕರು ನನ್ನ ಪರವಾಗಿ ಮಾತನಾಡಿದ್ರೆ ನೋಟಿಸ್ ನೀಡುವುದಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೆಲ ದಿನಗಳ ಹಿಂದೆ ಸಿಎಂ ಸಿದ್ಧರಾಮಯ್ಯ ಅವರು ನಾನೇ 5 ವರ್ಷ ಸಿಎಂ ಆಗಿ ಮುಂದುವರೆಯುತ್ತೇನೆ ಎಂದು ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿತ್ತು.
ಬಳಿಕ ಸಿಎಂ ಹೇಳಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರು ಡಿಸಿಎಂ ಡಿಕೆಶಿ ಪರವಾಗಿ ಮಾತನಾಡಿದ್ದು, ಒಂದೂವರೆ ವರ್ಷದ ಬಳಿಕ ಡಿಕೆ ಶಿವಕುಮಾರ್ ಸಿಎಂ ಆಗಿಯೇ ಆಗುತ್ತಾರೆ ಎಂದಿದ್ದರು. ಇದೀಗ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ ವಿರುದ್ಧ ಕಿಡಿಕಾರಿದ್ದರೆ.
ಪಕ್ಷದಲ್ಲಿ ಒಂದು ಶಿಸ್ತು ಇರಬೇಕು. ನನಗೆ ಯಾವ ಶಾಸಕರ ಬೆಂಬಲನೂ ಬೇಡ, ಯಾವ ಶಾಸಕರೂ ಬೇಡ. ರಾಮನಗರ ಎಮ್ ಎಲ್ ಎ ಇಕ್ಬಾಲ್ ಹುಸೇನ್ಗೆ ನೋಟಿಸ್ ಕೊಡಬೇಕು. ನನಗೆ ಯಾರ ರೆಕಮೆಂಡೇಶನ್ ಕೂಡ ಬೇಡ ಎಂದು ಡಿಕೆ ಶಿವಕುಮಾರ್ ಶಾಸಕರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.