ನನ್ನ ಬಗ್ಗೆ ತಪ್ಪು ವರದಿಯಾಗಿದೆ- ರಾಜೀನಾಮೆ ವಿಚಾರಕ್ಕೆ ಸುರೇಶ್‌ ಗೋಪಿ ಸ್ಪಷ್ಟನೆ

WhatsApp
Telegram
Facebook
Twitter
LinkedIn

ನವದೆಹಲಿ: ನನ್ನ ಬಗ್ಗೆ ಕೆಲ ಮಾಧ್ಯಮಗಳಲ್ಲಿ ತಪ್ಪು ವರದಿ ಬರುತ್ತಿದೆ ಎಂದು ತ್ರಿಶೂರು ಬಿಜೆಪಿ ಸಂಸದ ಸುರೇಶ್‌ ಗೋಪಿ ಹೇಳಿದ್ದಾರೆ.

ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಅವರು ನಾನು ಕೌನ್ಸಿಲ್‌ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂಬ ವರದಿ ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದೆ. ಇದು ತಪ್ಪು. ಪಿಎಂ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾವು ಕೇರಳದ ಅಭಿವೃದ್ಧಿ ಮತ್ತು ಸಮೃದ್ಧಿಗೆ ಬದ್ಧರಾಗಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಸುರೇಶ್‌ ಗೋಪಿ ಅವರು ಭಾನುವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಇಂದು ನನಗೆ ಮಂತ್ರಿ ಸ್ಥಾನ ಬೇಡ ಎಂದು ಹೇಳಿರುವುದಾಗಿ ವರದಿಯಾಗಿತ್ತು.
ತ್ರಿಶೂರ್ ಜನರಿಗಾಗಿ ಸಂಸದನಾಗಿ ಕೆಲಸ ಮಾಡಲು ನಾನು ಬಯಸುತ್ತೇನೆ. ಸಂಸದನಾಗಿ ಕೆಲಸ ಮಾಡುವುದೇ ನನ್ನ ಗುರಿ, ನಾನು ಏನನ್ನೂ ಕೇಳಿಲ್ಲ, ನನಗೆ ಈ ಹುದ್ದೆ ಬೇಕಾಗಿಲ್ಲ ಎಂದು ಹೇಳಿರುವಾಗಿ ವರದಿ ತಿಳಿಸಿತ್ತು.

ಸುರೇಶ್‌ ಗೋಪಿ ಈಗಾಗಲೇ ಕೆಲ ಚಲನಚಿತ್ರಗಳಿಗೆ ಸಹಿ ಹಾಕಿದ್ದಾರೆ. ಸಹಿ ಹಾಕಿದ ಎಲ್ಲಾ ಚಲನಚಿತ್ರಗಳ ಕೆಲಸ ಪೂರ್ಣಗೊಂಡ ನಂತರ ಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ವರದಿಯಾಗಿದೆ.

 

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon