ಬೆಂಗಳೂರು: ಭಾರತದ ಚಂದ್ರಯಾನ-3 ರ ಯಶಸ್ಸಿನ ನಂತರ, ದೇಶವು ಮತ್ತೊಂದು ಮಹತ್ತರ ಸಾಧನೆಗೆ ಸಜ್ಜಾಗುತ್ತಿದ್ದು, ಈ ಬಾರಿ ಇಸ್ರೋ ಸೂರ್ಯನಿತ್ತ ದೃಷ್ಟಿ ಇಟ್ಟಿದೆ. ಇಸ್ರೋದ ಸೂರ್ಯ ಮಿಷನ್ ಆಗಿರುವ ಆದಿತ್ಯ ಎಲ್-1 ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 11.50ಕ್ಕೆ ಉಡಾವಣೆಗೊಂಡಿತು.
ಇದು ಸೂರ್ಯನನ್ನು ಅಧ್ಯಯನ ಮಾಡುವ ಇಸ್ರೋದ ಮೊದಲ ಮಿಷನ್ ಆಗಿದ್ದು, ಸೂರ್ಯನ ಅಧ್ಯಯನಕ್ಕಾಗಿ ಏಳು ಪೇ ಲೋಡ್‌ಗಳನ್ನು ಆದಿತ್ಯ ಎಲ್-1 ಹೊಂದಿದೆ.
PSLV C-57 ರಾಕೆಟ್ ಆದಿತ್ಯ ಎಲ್-1 ಉಪಗ್ರಹವನ್ನು ನಭಕ್ಕೆ ಕೊಂಡೊಯ್ಯಲಿದ್ದು, ಉಪಗ್ರಹದ ತೂಕ 1500 ಕೆಜಿ ಇದೆ.