ಬೆಂಗಳೂರು: ಕನ್ನಡದ ಖ್ಯಾತ ಯೂಟ್ಯೂಬರ್ ಡಾ.ಬ್ರೋ (Dr.Bro Youtuber) ಯಾರಿಗೆ ಗೊತ್ತಿಲ್ಲ ಹೇಳಿ. ‘ನಮಸ್ಕಾರ್ ದೇವ್ರು’ ಎಂದೇ ವಿಡಿಯೋ ಆರಂಭಿಸುವ ಇವರು ಸುತ್ತದ ದೇಶಗಳೇ ಇಲ್ಲ. ಅಷ್ಟರಮಟ್ಟಿಗೆ ದೇಶ, ವಿದೇಶ ಸುತ್ತಿ ನಾನಾ ಮಾಹಿತಿಯನ್ನು ಕನ್ನಡದಲ್ಲೇ ನೀಡುವ ಇವರು ಇದೀಗ ಸ್ಯಾಂಡಲ್‌ವುಡ್ ಇಬ್ಬರು ದಿಗ್ಗಜ ಸ್ಟಾರ್‌ನಟರನ್ನೇ ಹಿಂದಿಕ್ಕಿದ್ದಾರೆ.
ಹೌದು, ಸ್ಯಾಂಡಲ್‌ವುಡ್ ಸ್ಟಾರ್ ನಟ ಅಭಿನಯ ಚಕ್ರವರ್ತಿ ಎಂದೇ ಖ್ಯಾತರಾದ ಕಿಚ್ಚ ಸುದೀಪ್ ಅವರು ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಇದೇ ರೀತಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅನೇಕ ಚಿತ್ರಗಳಲ್ಲಿ ನಟಿಸಿದ್ದು, ಇವರ ಅಭಿಮಾನಿ ಬಳಗವು ದೊಡ್ಡದಿದೆ.
ಇಂತಹ ದೊಡ್ಡ ಸ್ಟಾರ್ ನಟರನ್ನು ಕೆಲವು ವರ್ಷಗಳ ಹಿಂದಷ್ಟೇ ‘ಡಾ.ಬ್ರೊ’ ಹೆಸರಿನಲ್ಲಿ ಚಾನೆಲ್ ಆರಂಭಿಸಿ ಯೂಟ್ಯೂಬರ್ ಆಗಿರುವ ಗಗನ್ ಶ್ರೀನಿವಾಸ್ (Gagan Srinivas) ಅವರು ಸದ್ದಿಲ್ಲದೇ ಹಿಂದಿಕ್ಕಿದ್ದಾರೆ. ಹಾಗಾದರೆ ಇವರು ಯಾವುದರಲ್ಲಿ ಸ್ಟಾರ್ ನಟರಿಗಿಂತ ಮುಂದಿದ್ದಾರೆ? ಎಂಬುದಕ್ಕೆ ಉತ್ತರ ಇಲ್ಲಿದೆ.
ಕಿಚ್ಚು, ದಚ್ಚುಗಿಂತ ಡಾ.ಬ್ರೊಗೆ ಅಧಿಕ ಫಾಲೋವರ್ಸ್
ಡಾ.ಬ್ರೋ ಯುಟ್ಯೂಬರ್ ‘ಗಗನ್ ಶ್ರೀನಿವಾಸ್’ ಅವರು ಇನ್‌ಸ್ಟಾಗ್ರಾಮ್ (Dr.Bro Instagram) ನಲ್ಲಿ ಅತ್ಯಧಿಕ ಫಾಲೋವರ್ಸ್ ಹೊಂದುವ ಮೂಲಕ ಸ್ಟಾರ್ ನಟರನ್ನು ಹಿಂದಿಕ್ಕಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದ ಪೇಜ್‌ಗಳು ಡಾ.ಬ್ರೋ ಅವರಿಗೆ ಶುಭಾಶಯ ಕೋರಿದ್ದಾರೆ.
ಇತ್ತೀಚೆಗೆ ಕನ್ನಡದ ‘ಕಾಟೇರ’ ಸಿನಿಮಾ ಸಕ್ಸಸ್ ಕಂಡ ನಟ ದರ್ಶನ್ ಅವರು ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಈವರೆಗೆ ಒಟ್ಟು ಬರೋಬ್ಬರಿ 505 ಪೋಸ್ಟ್ ಗಳನ್ನು ಶೇರ್ ಮಾಡಿಕೊಂಡಿದ್ದು, ಅವರಿಗೆ ಒಟ್ಟು 2.1 ಮಿಲಿಯನ್ ಪಾಲೋವರ್ಸ್ (ಅನುಯಾಯಿ) ಇದ್ದಾರೆ.
ಇನ್ನು ಮತ್ತೊಬ್ಬ ಸ್ಟಾರ್ ನಟ ಕಿಚ್ಚ ಸುದೀಪ್ ಅವರು ಈವರೆಗೆ ಬರೋಬ್ಬರಿ 401 ಪೋಸ್ಟ್ ಗಳನ್ನು ಶೇರ್ ಮಾಡಿದ್ದು, ಅವರು ಒಟ್ಟು 2.3 ಮಿಲಿಯನ್ ಪಾಲೋವರ್ಸ್ ಹೊಂದಿದ್ದಾರೆ.
ಈ ಇಬ್ಬರು ಸ್ಟಾರ್‌ನಟರಿಗಿಂತ ಪ್ರಮುಖ ಯೂಟ್ಯೂಬರ್ ಡಾ.ಬ್ರೋ ಅವರು, 2.7 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಅಲ್ಲದೇ ಅವರು ಶೇರ್ ಮಾಡಿಕೊಂಡಿದ್ದು ಕೇವಲ 204 ಪೋಸ್ಟ್‌ಗಳು. ಈ ಇನ್‌ಸ್ಟಾಗ್ರಾಮ್ ಅನುಯಾಯಿಗಳ ವಿಚಾರದಲ್ಲಿ ಡಾ.ಬ್ರೋ ಈ ಇಬ್ಬರು ನಟರನ್ನು ಹಿಂದಿಕ್ಕಿದ್ದಾರೆ. ಈ ಮೂಲಕ ಅಪಾರ ಕ್ರೇಜ್ ನಟರಂತೆ ಒಬ್ಬ ಯೂಟ್ಯೂಬರ್ ಅವರಿಗೂ ಇದೆ ಎಂಬುದು ಸಾಬೀತಾಗಿದೆ.
‘ನಮಸ್ಕಾರ್ ದೇವ್ರು’ ಎನ್ನುತ್ತಲೇ ವಿಡಿಯೋ ಆರಂಭ..
ಬೆಂಗಳೂರು ಮೂಲದ ಗಗನ್ ಶ್ರೀನಿವಾಸ್ ಅವರು ಡಾ.ಬ್ರೋ ಯೂಟ್ಯೂಬ್ ಮೂಲಕ ಮೊದಲು ಕಾಮಿಡಿ ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಿದ್ದರು. ನಂತರ ರಾಜ್ಯದ ಪ್ರಮುಖ ವಿಷಯಗಳನ್ನು ಹೇಳಲು ಹೊರಟ ಅವರು ವಿಡಿಯೋ ವ್ಲಾಗ್ ಇದೀಗಿ ದೇಶ, ವಿದೇಶಗಳನ್ನು ಸುತ್ತುವಂತೆ ಮಾಡಿದೆ.
ಇತ್ತೀಚೆಗಷ್ಟೆ ಲೆಬನಾನ್ ದೇಶಕ್ಕೆ ಹೋಗಿದ್ದರು. ಪ್ರತಿ ವಿಡಿಯೋದಲ್ಲಿ ತನ್ನೆಲ್ಲ ವೀಕ್ಷಕರನ್ನು ‘ನಮಸ್ಕಾರ್ ದೇವ್ರು’ ಅಂತಲೇ ಸಂಬೋಧಿಸುತ್ತಾರೆ. ವೀಕ್ಷಕರನ್ನು ದೇವರು ಎಂದು ಭಾವಿಸಿರುವ ಡ್ರಾ.ಬ್ರೋ ಅವರ ಮಾತುಗಳು, ಅವರು ನೀಡುವ ಮಾಹಿತಿ, ಅವರ ವಿಡಿಯೋಗಳಿಗೆ ಕಾಯುವ ವರ್ಗವು ಇದೆ.
ಡಾ.ಬ್ರೋ ಕೆಲಸ ಮೆಚ್ಚಿದ ಲಕ್ಷಾಂತರ ಜನ
ದುಬೈ, ಲಂಡನ್, ಚೀನಾ, ದಕ್ಷಿಣ ಆಫ್ರಿಕಾ, ಪಾಕಿಸ್ಟಾನ್, ಸಿಂಗಾಪೂರ್ ಸೇರಿದಂತೆ ವಿಶ್ವದ ನಾನಾ ದೇಶಗಳನ್ನು ಸುತ್ತಿರುವ ಡಾ.ಬ್ರೋ ಅಲ್ಲಿನ ಆಚಾರ ವಿಚಾರಗಳು, ವೈಶಿಷ್ಟತೆ, ಉಡುಗೆ ತೊಡುಗೆಗಳು, ಆಹಾರ ಪದ್ಧತಿ, ಅಲ್ಲಿನ ಜನರ ಜೀವನ ಸೇರಿದಂತೆ ಗೊತ್ತಿರದ ಅನೇಕ ವಿಷಯಗಳನ್ನು ಕನ್ನಡದಲ್ಲಿ ವಿವರಿಸುತ್ತಾ ವಿಡಿಯೋ ಸೇರೆ ಹಿಡಿದು ತಮ್ಮ ಯೂಟ್ಯೂಬ್ ಮೂಲಕ ಕನ್ನಡಿಗರಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಈ ಕೆಲಸವನ್ನು ಲಕ್ಷಾಂತರ ಜನರು ಮೆಚ್ಚಿಕೊಂಡಿದ್ದಾರೆ.