ಬೆಂಗಳೂರು: ಕಾಂಗ್ರೆಸ್ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ಕೊಡುತ್ತದೆ ಹಾಗಾಗಿ ಮದ್ಯದಂಗಡಿ ಹೆಚ್ಚಳಕ್ಕೆ ನನ್ನ ವಿರೋಧವೂ ಇದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಮದ್ಯದಂಗಡಿಗಳಿಗೆ ಹೆಚ್ಚುವರಿ ಅನುಮತಿ ಕೊಡಲ್ಲ ಎಂಬ ಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಹೆಚ್ಚು ಅನುಮತಿ ಕೊಡುವುದಕ್ಕೆ ನಮ್ಮ ವಿರೋಧ ಇದೆ ಎಂದರು.
ಇನ್ನು ಸರ್ಕಾರವು ಮಹಿಳಾ ಸಬಲೀಕರಣಕ್ಕೆ ಇಷ್ಟೆಲ್ಲಾ ಒತ್ತು ಕೊಟ್ಟು ಇದರ ಮಧ್ಯೆ ಜನಸಂಖ್ಯೆ ಆಧಾರಿತವಾಗಿ ಮದ್ಯದಂಗಡಿ ಹೆಚ್ಚಳಕ್ಕೆ ಸರ್ಕಾರದ ಭಾಗವಾದರೂ ನಾನು ವಿರೋಧಿಸುತ್ತೇನೆ ಎಂದಿದ್ದಾರೆ.