ತಿರುಮಲ: ನವದಂಪತಿಗಳಿಗೆ ಸುಲಭವಾಗಿ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿಸುವ ವಿಶೇಷ ಯೋಜನೆಯನ್ನು, ಟಿಟಿಡಿ ಜಾರಿಗೊಳಿಸಿದೆ. ಈ ಮೂಲಕ ನವ ದಂಪತಿಗಳಿಗೆ ಗುಡ್ ನ್ಯೂಸ್ ನೀಡಿದೆ.
ಈ ಬಗ್ಗೆ ಟಿಟಿಡಿ ಮಾಹಿತಿ ನೀಡಿದ್ದು, ಯಾವುದೇ ಜೋಡಿ ಮದುವೆಯಾದ ಒಂದು ವಾರದೊಳಗೆ ವಿಶೇಷ ಟಿಕೆಟ್ ಪಡೆದು ಸುಲಭವಾಗಿ ತಿರುಪತಿ ತಿಮ್ಮಪ್ಪನ ದರ್ಶನ ಮಾಡಬಹುದು ಎಂದು ತಿಳಿಸಿದೆ.
ತಿರುಮಲಗಿರಿ ನಿವಾಸನ ದರ್ಶನ ಮಾಡಲು ದೇಗುಲ ಆಡಳಿತ ಮಂಡಳಿ ವಿಶೇಷ ದರ್ಶನಕ್ಕೆ ಅವಕಾಶ ಕಲ್ಪಿಸಿದೆ. ಅದರಂತೆ ನವದಂಪತಿಗಳು ಮದುವೆಯ ದಿರಿಸಿನಲ್ಲೇ ಮದುವೆಯಾದ ಮರುಕ್ಷಣವೇ ಬಂದು ತಿಮ್ಮಪ್ಪನ ದರ್ಶನ ಪಡೆಯಬೇಕೆಂದು ಸೂಚಿಸಿದೆ.
ಇದಲ್ಲದೇ ಶ್ರೀವಾರಿ ಕಲ್ಯಾಣೋತ್ಸವದ ಮದುವೆ ಸಮಾರಂಭ ಹಾಗೂ ದೇವರ ವಿಶೇಷ ದರ್ಶನದಲ್ಲೂ ನವದಂಪತಿಗಳಿಗೆ ಪ್ರತಿನಿತ್ಯ 20 ಟಿಕೆಟ್ ಗಳನ್ನು ಮೀಸಲಿಡಲಾಗುತ್ತಿದೆ. ದರ್ಶನಕ್ಕೂ ಒಂದು ವಾರದ ಹಿಂದೆ ಮದುವೆಯಾದ ನವದಂಪತಿಗಳು 1000 ರೂ ಶುಲ್ಕ ಸಲ್ಲಿಸಿ ಕಲ್ಯಾಣೋತ್ಸವ ಸೇವಾ ಟಿಕೆಟ್ ಅನ್ನು 1000 ನೀಡಿ ಖರೀದಿಸಬಹುದು. ಟಿಕೆಟ್ ಖರೀದಿ ವೇಳೆ ಮದುವೆ ಪೋಟೋ, ಆಧಾರ್ ದಾಖಲೆ ನೀಡವುದು ಕಡ್ಡಾಯ ಎಂದು ಟಿಟಿಡಿ ತಿಳಿಸಿದೆ.