ದೇಶದಲ್ಲಿ ಇಂದಿನಿಂದ ಅದ್ದೂರಿಯಾಗಿ ನವರಾತ್ರಿ ಸಂಭ್ರಮ ಪ್ರಾರಂಭವಾಗುತ್ತದೆ. ನವರಾತ್ರಿಯ ಮೊದಲ ದಿನದ ಪೂಜೆಯನ್ನು ತಾಯಿ ಶೈಲಪತ್ರಿಗೆ ಸಮರ್ಪಿಸಲಾಗುತ್ತದೆ.
ಶೈಲಪುತ್ರಿ ದೇವಿ ತಾಳ್ಮೆ ಮತ್ತು ಶುದ್ಧತೆಯ ಪ್ರತೀಕವಾಗಿದ್ದಾಳೆ. ಶೈಲಪುತ್ರಿ ಪೂಜೆಯಿಂದ ಭಕ್ತರಿಗೆ ಸುಖ, ನೆಮ್ಮದಿ ಹಾಗೂ ಶಾಂತಿ ದೊರೆಯುತ್ತದೆ ಎಂದು ನಂಬಲಾಗಿದೆ.
ಶೈಲಪುತ್ರಿ ದೇವಿಗೆ ಬಿಳಿ ಬಣ್ಣದ ಬಟ್ಟೆ ಮತ್ತು ಹೂವುಗಳನ್ನು ಅರ್ಪಿಸಿ ಪೂಜೆ ಮಾಡಿದರೆ ದೇವಿ ಪ್ರಸನ್ನರಾಗುತ್ತಾರೆ.
ಪೂಜೆಯ ವೇಳೆ ಓಂ ಶೈಲಪುತ್ರೈ ನಮಃ ಎನ್ನುವ ಮಂತ್ರವನ್ನು 108 ಬಾರಿ ಪಠಿಸಿ ಬಳಿಕ ಅಂತಿಮವಾಗಿ ತಾಯಿಗೆ ಆರತಿಯನ್ನು ಮಾಡಬೇಕು