ಬೆಂಗಳೂರು: ನಾಡಿನೆಲ್ಲೆಡೆ ಗೌರಿ ಗಣೇಶ ಹಬ್ದದ ಸಂಭ್ರಮ ಮನೆ ಮಾಡಿದ್ದು, ವಿಘ್ನ ನಿವಾರಕ ಗೌರಿ ಗಣೇಶನನ್ನು ಪೂಜಿಸಲಾಗುತ್ತಿದೆ.
ಸೋಮವಾರ ಬೆಳಗಿನ ಜಾವದಿಂದಲೇ ಗಣಪತಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ-ಪುನಸ್ಕಾರಗಳು ನೆರವೇರುತ್ತಿವೆ. ಇನ್ನು ಮನೆಗಳಲ್ಲಿ ಗಣೇಶ ಹಬ್ಬ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಪ್ರಾತಃ ಕಾಲದಿಂದಲೇ ಜನರು ವಿಘ್ನನಿವಾರಕನ ವಿಗ್ರಹಗಳನ್ನು ತಂದು ಪ್ರತಿಷ್ಠಾಪಿಸಿ, ಪೂಜೆ-ಪುನಸ್ಕಾರ ನೆರವೇರಿಸುತ್ತಿದ್ದಾರೆ.
ಕರಾವಳಿಯಲ್ಲಿ ಗೌರಿ ಹಬ್ಬ ಇಂದು ಹಾಗೂ ನಾಳೆ ಚೌತಿ ಹಬ್ಬ ಆಚರಿಸಲಾಗುತ್ತಿದೆ. ಇದಕ್ಕಾಗಿ ದೇವಸ್ಥಾನ , ಮನೆ ಹಾಗೂ ಸಂಘ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಿಶೇಷ ಸಿದ್ದತೆಗಳು ಭರದಿಂದ ಸಾಗಿದೆ. ಚೌತಿ ಹಬ್ಬದ ಪ್ರಯುಕ್ತ ಹಲವು ದೇವಸ್ಥಾನಗಳಲ್ಲಿ ಪ್ರಸಾದ ರೂಪದಲ್ಲಿ ಕದಿರನ್ನು ವಿತರಿಸಲಾಗುವುದು.