ನವದೆಹಲಿ:” ತಮ್ಮ ಕಂಪನಿಯನ್ನು ಸ್ಥಾಪಿಸಿದ ಸಂದರ್ಭದಿಂದ 1994 ರವರೆಗೆ ವಾರಕ್ಕೆ 85 ರಿಂದ 90 ಗಂಟೆಗಳ ಕಾಲ ಕೆಲಸ ಮಾಡುತ್ತಿದೆ ಎಂದು ಇನ್ಪೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ ಹೇಳಿದ್ದಾರೆ.
‘ಭಾರತದ ಒಟ್ಟಾರೆ ಉತ್ಪಾದಕತೆಯನ್ನು ಹೆಚ್ಚಿಸಲು ಯುವಜನರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಸಿದ್ಧ ರಿರಬೇಕು’ ಎಂಬ ಸಲಹೆ ನೀಡಿ ಚರ್ಚೆಗೆ ಗ್ರಾಸವಾಗಿ ತಿಂಗಳುಗಳ ನಂತರ, ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಚಾರವನ್ನು ನಾರಾಯಣಮೂರ್ತಿ ಹೇಳಿದ್ದಾರೆ.
“ನಾನು ಬೆಳಿಗ್ಗೆ 6:20 ಕ್ಕೆ ಕಚೇರಿಯಲ್ಲಿರುತ್ತಿದ್ದು, ರಾತ್ರಿ 8:30 ಕ್ಕೆ ಕಚೇರಿಯಿಂದ ಹೊರಡುತ್ತಿದ್ದೆ ಮತ್ತು ವಾರದಲ್ಲಿ ಆರು ದಿನ ಕೆಲಸ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. ್
“ಇಂದು ಅಭಿವೃದ್ಧಿ ಹೊಂದಿದ ಪ್ರತಿಯೊಂದು ರಾಷ್ಟ್ರವೂ ಅದನ್ನು ಕಠಿಣ ಶ್ರಮದ ಮೂಲಕ ಸಾಧಿಸಿದೆ ಎಂಬುವುದು ನನಗೆ ತಿಳಿದಿದೆ” ಎಂದು ಹೇಳಿದ್ದಾರೆ
“ಕಷ್ಟಪಟ್ಟು ಕೆಲಸ ಮಾಡುವುದು” ಬಡತನದಿಂದ ಪಾರಾಗುವ ಏಕೈಕ ಮಾರ್ಗವೆಂದು ತಮ್ಮ ಪೋಷಕರು ಕಲಿಸಿದ್ದರು. ಹೆಚ್ಚಿನ ಕೆಲಸದ ಸಮಯದಿಂದ ಒಬ್ಬ ವ್ಯಕ್ತಿಯು ಉತ್ಪಾದಕತೆ ಹೆಚ್ಚುತ್ತದೆ. ನನ್ನ ಸಂಪೂರ್ಣ 40 ವರ್ಷಗಳ ವೃತ್ತಿಪರ ಜೀವನದಲ್ಲಿ, ನಾನು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಿದ್ದೇನೆ . ನಾನು ವಾರಕ್ಕೆ ಕನಿಷ್ಠ 85 ರಿಂದ 90 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆ ಅದು ಎಂದೂ ವ್ಯರ್ಥವಾಗಲಿಲ್ಲ” ಎಂದು ಇನ್ಪೋಸಿಸ್ ಸಹ ಸಂಸ್ಥಾಪಕ ಹೇಳಿದ್ದಾರೆ.
































