ಬೆಂಗಳೂರು : ಬಿಜೆಪಿ- ಜೆಡಿಎಸ್ ಮೈತ್ರಿ ವಿಷಯಕ್ಕೆ ಇಡೀ ಅಲ್ಪಸಂಖ್ಯಾತ ಸಮುದಾಯವೇ ಸ್ವಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸುತ್ತಿರುವ ಬೆನ್ನಲ್ಲೇ ಬಿಜೆಪಿಯ MLC ಎಚ್ ವಿಶ್ವನಾಥ್ ‘ನಾನು ಅಧ್ಯಕ್ಷ ಆಗಿದ್ರೆ ಎಚ್ ಡಿ ಕುಮಾರಸ್ವಾಮಿಯನ್ನ ಪಕ್ಷದಿಂದಲೇ ಅಮಾನತು ಮಾಡುತ್ತಿದ್ದೆ ಎಂದು ಕಿಡಿಕಾರಿದ್ದಾರೆ. ಮಾಧ್ಯಮದರೊಂದಿಗೆ ಮಾತನಾಡಿ, ಎಚ್ ವಿಶ್ವನಾಥ್, ಮೈತ್ರಿಯ ಮೂಲಕ ಕುಮಾರಸ್ವಾಮಿ ಅವರು ಜಾತ್ಯತೀತ ಅನ್ನೋ ಅರ್ಥವನ್ನೇ ತೆಗೆದುಹಾಕಿಬಿಟ್ಟಿದ್ದಾರೆ. ಯಾರು ಚಮಚಾಗಿರಿ ಮಾಡುತ್ತಾರೆ ಅವರು ಮೈತ್ರಿಗೆ ಒಪ್ಪುತ್ತಾರೆ. ನಾನೇನಾದರೂ JDS ರಾಜ್ಯಾಧ್ಯಕ್ಷನಾಗಿದ್ದರೆ ಎಚ್.ಡಿ ಕುಮಾರಸ್ವಾಮಿಯನ್ನ 6 ವರ್ಷ ಅಮಾನತು ಮಾಡುತ್ತಿದ್ದೆ ಎಂದು ಸಿಎಂ ಇಬ್ರಾಹಿಂ ಪರ ಬ್ಯಾಟ್ ಬೀಸಿದ್ದಾರೆ. ಸಿಎಂ ಇಬ್ರಾಹಿಂ ಅವರ ಉಚ್ಚಾಟನೆ ಹೇಳಿಕೆಗೆ ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅವರು ಪ್ರತಿಕ್ರಿಯಿಸಿದ್ದು, ಸಿಎಂ ಇಬ್ರಾಹಿಂ ಅವರ ನಿಲುವು ಸರಿಯಾಗಿದೆ. ಅವರಿಗೆ ಆ ಅಧಿಕಾರ ಇದೆ. ಎಚ್‍ಡಿಕೆ ವೈಯಕ್ತಿಕವಾಗಿ ಬಿಜೆಪಿ ಜೊತೆಗೆ ಮೈತ್ರಿ ಬಗ್ಗೆ ಮಾತಾಡಿಕೊಂಡಿದ್ದಾರೆ ಎಂದು ತಿಳಿಸಿದರು.