ಟೂರಿಸ್ಟ್ ವಾಹನ/ಗೂಡ್ಸ್ ಗಾಡಿ ಖರೀದಿಗೆ 3 ಲಕ್ಷ ಸಹಾಯಧನ(Tourist car loan subsidy yojana)ಪಡೆಯಲು ರಾಜ್ಯದ ವಿವಿಧ ನಿಗಮಗಳಿಂದ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಸ್ವಾವಲಂಭಿ ಸಾರಥಿ(swavalambi sarati yojane) ಯೋಜನೆಯಡಿ ಸಬ್ಸಿಡಿಯಲ್ಲಿ ನಾಲ್ಕು ಚಕ್ರ ವಾಹನ ಖರೀದಿಗೆ ಸಹಾಯಧನ ನೀಡಲು ಅನ್ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವುದು ಹೇಗೆ..? ಅರ್ಜಿ ಸಲ್ಲಿಕೆ ವಿಧಾನದ ವಿವರ, ಅಗತ್ಯ ದಾಖಲಾತಿಗಳೇನು..? ಯಾರೆಲ್ಲ ಅರ್ಜಿ ಸಲ್ಲಿಸಬಹುದು ಇತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ಪ್ರತಿ ವರ್ಷದಂತೆ ಈ ವರ್ಷವು ಸ್ವ-ಉದ್ಯೋಗ ಮಾಡಲು ಆಸಕ್ತಿಯಿರುವ ಯುವಕರಿಗೆ ಪ್ರೋತ್ಸಾಹ ನೀಡಲು ರಾಜ್ಯದ ವಿವಿಧ ನಿಗಮದಿಂದ ಸಹಾಯಧನ ಯೋಜನೆಯಡಿ ಟೂರಿಸ್ಟ್ ವಾಹನ/ಗೂಡ್ಸ್ ಗಾಡಿ ತೆಗೆದುಕೊಳ್ಳಲು ಸಬ್ಸಿಡಿ ನೀಡಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದ್ದು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಈ ಅಂಕಣದಲ್ಲಿ ತಿಳಿಸಿರುವ ಸಂಪೂರ್ಣ ಮಾಹಿತಿಯನ್ನು ಓದಿಕೊಂಡು ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿ.
ಯಾವೆಲ್ಲ ನಿಗಮಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ?
1) ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
2) ಉಪ್ಪಾರ ಅಭಿವೃದ್ಧಿ ನಿಗಮ
3) ಮರಾಠ ಅಭಿವೃದ್ಧಿ ನಿಗಮ
4) ವಿಶ್ವಕರ್ಮ ಅಭಿವೃದ್ಧಿ ನಿಗಮ
5) ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ
6) ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ
7) ಸವಿತಾ ಸಮಾಜ ಅಭಿವೃದ್ಧಿ ನಿಗಮ
8) ಅಲೆಮಾರಿ ಅರೆ-ಅಲೆಮಾರಿ ಅಭಿವೃದ್ಧಿ ನಿಗಮ
9) ಒಕ್ಕಲಿಗ ಅಭಿವೃದ್ಧಿ ನಿಗಮ
ಎಲ್ಲಿ ಅರ್ಜಿ ಸಲ್ಲಿಸಬೇಕು?
ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್/ಕಂಪ್ಯೂಟರ್ ಸೆಂಟರ್ ಅನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
1) ಅರ್ಜಿದಾರರ ಆಧಾರ್ ಕಾರ್ಡ.
2) ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
3) ಡ್ರೈವಿಂಗ್ ಲೈಸೆನ್ಸ್.
4) ಬ್ಯಾಂಕ್ ಪಾಸ್ ಬುಕ್ ಪ್ರತಿ.
5) ರೇಷನ್ ಕಾರ್ಡ ಪ್ರತಿ.
6) ಮೊಬೈಲ್ ಸಂಖ್ಯೆ.
ಯಾವೆಲ್ಲ ವರ್ಗದ ಜನರು ಅರ್ಜಿ ಸಲ್ಲಿಸಬಹುದು?
ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಸಹಾಯಧನ ಎಷ್ಟು?
ಟೂರಿಸ್ಟ್ ವಾಹನ ಅಥವಾ ಗೂಡ್ಸ್ ಗಾಡಿ ಖರೀದಿಗೆ ಶೇ 50% ಸಬ್ಸಿಡಿಯಲ್ಲಿ 3 ಲಕ್ಷದ ಸಹಾಯಧನ ನೀಡಲಾಗುತ್ತದೆ.
ಪರವಾನಗಿ ಹೊಂದಿರಬೇಕು:
ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಲಘುವಾಹನ/ಲೈಟ್ ವಾಹನ ಚಲಾವಣೆ ಪರವಾನಗಿಯನ್ನು ಹೊಂದಿರಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಬಹುತೇಕ ಎಲ್ಲಾ ನಿಗಮಗಳಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಆಗಸ್ಟ್ 2024 ಅಗಿರುತ್ತದೆ. ಈ ದಿನಾಂಕ ಒಳಗಾಗಿ ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಅರ್ಹತೆಗಳು:
ಅರ್ಜಿದಾರರ ಕುಟುಂಬದ ವಾರ್ಷಿಕ ಅದಾಯ ಗ್ರಾಮಾಂತರದಲ್ಲಿ ರೂ 98,000/- ನಗರ ಪ್ರದೇಶದಲ್ಲಿ 1,20,000/- ಮಿತಿಯೊಳಗಿರಬೇಕು.
ಅರ್ಜಿದಾರರು ವಯಸ್ಸು 21 ವರ್ಷ ಮೇಲ್ಪಟ್ಟು 45 ವರ್ಷದ ಒಳಗಿರಬೇಕು.
ಈ ಯೋಜನೆಯಡಿ ಅರ್ಥಿಕ ಸಹಾಯಧನ ಪಡೆಯಲು ಇಚ್ಚಿಸುವ ಅರ್ಜಿದಾರರು ಲಘುವಾಹನ ಚಾಲನಾ ಪರವಾನಿಗೆಯನ್ನು ಹೊಂದಿರಬೇಕು.
ಅರ್ಜಿದಾರನ್ನು ನಿರುದ್ಯೋಗಿಯಾಗಿರಬೇಕು.
ಯಲ್ಲೋ(Yellow Board) ಬೋರ್ಡ ವಾಹನ ನೋಂದಾಯಿಸಲು ಒಪ್ಪಿಗೆ ಇರಬೇಕು.
				
															
                    
                    
                    
                    
                    

































