ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಫಲಾನುಭವಿ ರೈತರಿಗೆ ಕೇಂದ್ರ ಸರ್ಕಾರವು ಮಹತ್ವದ ಮಾಹಿತಿ ನೀಡಿದೆ.
ಮಾರ್ಚ್ 31ರೊಳಗೆ ಇ-ಕೆವೈಸಿ ಮಾಡದಿದ್ದರೆ ಕಿಸಾನ್ ಯೋಜನೆಯ ಹಣ ಖಾತೆಗೆ ಜಮಾ ಆಗುವುದಿಲ್ಲ ಎಂದು ತಿಳಿಸಿದೆ.
ಸರ್ಕಾರವು ಶೀಘ್ರದಲ್ಲೇ 17ನೇ ಕಂತಿನ ಹಣವನ್ನು ರೈತರ ಖಾತೆಗೆ ಬಿಡುಗಡೆ ಮಾಡುತ್ತದೆ.
ಆದರೆ ಈ ಯೋಜನೆಯಡಿ 2000 ರೂ. ಲಾಭವನ್ನು ಪಡೆಯಲು, ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದೆ.
ನೀವು ಇ-ಕೆವೈಸಿ ಮಾಡದಿದ್ದರೆ, ವಾರ್ಷಿಕವಾಗಿ 6000 ರೂ.ಗಳನ್ನು ಕಳೆದುಕೊಳ್ಳಬಹುದು.