ಚಿತ್ರದುರ್ಗ; ನಾಳೆ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಎಚ್.ಎಸ್.ಟಿ.ಸ್ವಾಮಿ , ನಿವೃತ್ತ ಮುಖ್ಯ ಶಿಕ್ಷಕರ ಕಿವಿಮಾತು ಏನಪ್ಪ ಅಂದ್ರೆ.
*ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷಾ ಸೂಚನೆಗಳು*
1.ಪ್ರವೇಶ ಪತ್ರವನ್ನು ಪರೀಕ್ಷಿಸಿಕೊಳ್ಳಿ
2.ಒಂಭತ್ತು ಗಂಟೆಗೆ ಪರೀಕ್ಷಾ ಕೇಂದ್ರದಲ್ಲಿ ಇರುವಂತೆ ನೋಡಿಕೊಳ್ಳಿ. 3.ಜಾಮಿಟ್ರಿ ಬಾಕ್ಸ್ ಜೊತೆಗಿರಲಿ
4.ಎರಡರಿಂದ ಮೂರು ಉತ್ತಮ ಪೆನ್ ಗಳಿರಲಿ
5.ಮಿತವಾಗಿ ಆಹಾರ ಸೇವಿಸಿ ಹಾಗೂ ಭಯ, ಆತಂಕ ಬೇಡ
6.ಉತ್ತಮ ಕ್ಲಿಪ್ ಬೋರ್ಡ್ ನಿಮ್ಮಲ್ಲಿರಲಿ
7. ಕೀ ಪಾಯಿಂಟ್ಸ್ ಮತ್ತು ಸಣ್ಣ ನೋಟ್ಸ್ ಜೊತೆಗಿರಲಿ ಹಾಗೆಯೇ ಕಣ್ಣಾಡಿಸಿ
8.ಪರೀಕ್ಷೆ ಬರೆಯುವುದಕ್ಕೆ ಅರ್ಧ ಗಂಟೆ ಮುಂಚೆ ಓದುವುದನ್ನು ನಿಲ್ಲಿಸಿ
9.ಯಾವುದೇ ರೀತಿಯ ಹಾಳೆ, ಸ್ಲಿಪ್ ಕೊಂಡೋಯ್ಯಬೇಡಿ
10.ಚಿಕ್ಕ ವಾಟರ್ ಬಾಟಲ್ ನಿಮ್ಮ ಜೊತೆಗಿರಲಿ
11.ನಿಮ್ಮ ರಿಜಿಸ್ಟರ್ ಸಂಖ್ಯೆ ಚೆಕ್ ಮಾಡಿಕೊಳ್ಳಿ
12.ಪರೀಕ್ಷಾ ಕೊಠಡಿಯಲ್ಲಿ 5 ನಿಮಿಷ ರಿಲ್ಯಾಕ್ಸ್ ಆಗಿ
13.ಉತ್ತರ ಪತ್ರಿಕೆಯ ಮೇಲೆ ರಿಜಿಸ್ಟರ್ ಸಂಖ್ಯೆ ಮತ್ತು ಇತರೆ ಮಾಹಿತಿಯನ್ನು ಸರಿಯಾಗಿ ತುಂಬಿ
14.ಸರಳ ಪ್ರಶ್ನೆಗಳಿಗೆ ನಿಮಗೆ ಗೊತ್ತಿರುವ ಉತ್ತರಗಳನ್ನು ಬೇಗನೇ ಬರೆಯಿರಿ
15. ಯಾವುದೇ ಕಾರಣಕ್ಕೂ ಸಮಯ ಹಾಳು ಮಾಡಬೇಡಿ
16.ಶುದ್ಧ, ನೇರ ಉತ್ತರಗಳನ್ನು ಸ್ಪಷ್ಟವಾಗಿ ಬರೆಯಿರಿ
17.ಸಮಯ ಪಾಲನೆಗಾಗಿ ಒಂದು ಸರಳ ವಾಚ್ ಕಟ್ಟಿಕೊಳ್ಳಿ
18.ಬೇರೆ ವಿದ್ಯಾರ್ಥಿಗಳು ಹೆಚ್ಚು ಹಾಳೆಗಳನ್ನು ಪಡೆದರೆ ನೀವು ಆತಂಕ ಪಡಬೇಡಿ, ನಿಮಗೆ ಅವಶ್ಯಕವಿದ್ದರೆ ಮಾತ್ರ ಹೆಚ್ಚುವರಿ ಹಾಳೆ ಪಡೆದುಕೊಳ್ಳಿ
18.ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬರೆದ ನಂತರ ಒಮ್ಮೆ ಕೂಲಂಕುಷವಾಗಿ ಪರಿಶೀಲಿಸಿ
19.ಬರೆದಿರುವ ಎಲ್ಲಾ ಪುಟಗಳನ್ನು ಪರಿಶೀಲಿಸಿ
20. ಯಾವುದೇ ಕಾರಣಕ್ಕೂ ಸಮಯಕ್ಕಿಂತ ಮುಂಚೆ ಪರೀಕ್ಷಾ ಕೊಠಡಿಯಿಂದ ಹೊರ ಬರಬೇಡಿ
ಶುಭವಾಗಲಿ ವಿದ್ಯಾರ್ಥಿಗಳೇ
– ಎಚ್.ಎಸ್.ಟಿ.ಸ್ವಾಮಿ , ನಿವೃತ್ತ ಮುಖ್ಯ ಶಿಕ್ಷಕರು ಚಿತ್ರದುರ್ಗ