ಬೆಂಗಳೂರು: ನಟ ದರ್ಶನ್ ಜಾಮೀನಿಗಾಗಿ ಸಲ್ಲಿಸಿದ್ದಂತ ಅರ್ಜಿಯನ್ನು ಸಿಸಿಹೆಚ್ ನ್ಯಾಯಾಲಯವು ವಜಾಗೊಳಿಸಿತ್ತು. ಈ ಹಿನ್ನಲೆಯಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು. ಇಂದು ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಪೀಠವು, ಜಾಮೀನು ಅರ್ಜಿಯನ್ನು ನಾಳೆಗೆ ಮುಂದೂಡಿಕೆ ಮಾಡಿದೆ.
ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜಾಮೀನು ಕೋರಿ ಸಲ್ಲಿಸಿದ್ದಂತ ಅರ್ಜಿಯನ್ನು ಹೈಕೋರ್ಟ್ ನ ನ್ಯಾಯಮೂರ್ತಿ ಎಸ್ ವಿಶ್ವಚಿತ್ ಅವರನ್ನೊಳಗೊಂಡಂತ ನ್ಯಾಯಪೀಠವು ನಡೆಸಿತು. ಪ್ರಕರಣ ಸಂಬಂಧ ವರದಿಯನ್ನು ನೀಡಲು ನಿರ್ದೇಶಿಸಿದ್ದರಿಂದಾಗಿ ಜೈಲು ಅಧಿಕಾರಿಗಳು ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ನಟ ದರ್ಶನ್ ಪ್ರಕರಣದ ವರದಿಯನ್ನು ಸಲ್ಲಿಸಿತು. ಈ ಬಳಿಕ ವಿಚಾರಣೆಯನ್ನು ಹೈಕೋರ್ಟ್ ನಾಳೆಗೆ ಮುಂದೂಡಿಕೆ ಮಾಡಿದೆ.