ನಾಳೆ ಮುಂಗಾರು ಮಳೆ ನಟಿ ಪೂಜಾ ಗಾಂಧಿ ಮದುವೆ – ಕನ್ನಡ ಕಲಿಸಿದ ಗುರುವೇ ಬಾಳ ಸಂಗಾತಿ

ಬೆಂಗಳೂರು: ‘ಮುಂಗಾರು ಮಳೆ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸಿದ ನಟಿ ಪೂಜಾ ಗಾಂಧಿ ನಾಳೆ (ಬುಧವಾರ) ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಬಗ್ಗೆ ಕನ್ನಡದಲ್ಲಿ ಖುದ್ದಾಗಿ ಆಮಂತ್ರಣ ಪತ್ರವನ್ನು ಬರೆದಿರುವ ಪೂಜಾ ಗಾಂಧಿ ಅವರು, ‘ನವೆಂಬರ್ 29ರಂದು ಸಂಜೆ ಮಂತ್ರ ಮಾಂಗಲ್ಯದ ಮೂಲಕ ವಿಜಯ್‌ ಘೋರ್ಪಡೆ ಅವರನ್ನು ಮದುವೆಯಾಗುತ್ತಿದ್ದೇನೆ. ನಮ್ಮನ್ನು ಹರಸಿ, ಆಶೀರ್ವದಿಸಿ’ ಎಂದು ತಿಳಿಸಿದ್ದಾರೆ. ಉದ್ಯಮಿ ಹಾಗೂ ಅವರಿಗೆ ಕನ್ನಡ ಕಲಿಸಿರುವ ವಿಜಯ್ ಘೋರ್ಪಡೆ ಎಂಬುವರ ಜತೆ ಪೂಜಾ ಹೊಸ ಬದುಕಿಗೆ ಕಾಲಿಡುತ್ತಿದ್ದಾರೆ. ವಿಜಯ್ ಬೆಂಗಳೂರಿನ ಲಾಜೆಸ್ಟಿಕ್ ಕಂಪನಿಯ ಮಾಲೀಕರು. ಪೂಜಾ ಗಾಂಧಿ ಮತ್ತು ವಿಜಯ್‌ ಅವರು ನವೆಂಬರ್ 29ರಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗಲಿದ್ದಾರೆ. ಸಿನಿಮಾದಿಂದ ಬ್ರೇಕ್‌ ತೆಗೆದುಕೊಂಡಿದ್ದ ಪೂಜಾ ಗಾಂಧಿ ಅವರು ಕನ್ನಡ ಕಲಿಕೆಯತ್ತ ಆಸಕ್ತಿ ತೋರಿದ್ದರು. ಕಳೆದ ಎರಡು ವರ್ಷಗಳಿಂದ ಕನ್ನಡದ ಅಕ್ಷರಗಳು, ವರ್ಣಮಾಲೆಯನ್ನು ಮಕ್ಕಳಂತೆ ಅವರು ಅಭ್ಯಾಸ ಮಾಡಿದ್ದಾರೆ. ಹಂತಹಂತವಾಗಿ ವಾಕ್ಯ ರಚನೆಯನ್ನೂ ಅವರು ಕಲಿತಿದ್ದಾರೆ. ಕನ್ನಡದ ಮೇಲಿನ ಅವರ ಪ್ರೀತಿಗೆ ಅವರೇ ಕನ್ನಡದಲ್ಲಿ ಬರೆದ ಮದುವೆ ಆಮಂತ್ರಣವೇ ಸಾಕ್ಷ್ಯವಾಗಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement