ಚಿತ್ರದುರ್ಗ: ಸಾಮಾನ್ಯರು ಊಹಿಸುವಂತೆ ಸೂರ್ಯ ಪ್ರತಿ ದಿನದ ಮದ್ಯಾಹ್ನ ನೆತ್ತಿಯ ಮೇಲೆ ಇರುವುದಿಲ್ಲ. ಯಾವುದೇ ಮದ್ಯಾಹ್ನದ ನೆರಳನ್ನು ನೋಡುವುದರಿಂದ ಇದು ತಿಳಿಯುತ್ತದೆ.
ಸೂರ್ಯ ಗರಿಷ್ಠ ಎತ್ತರ ತಲುಪಿದಾಗ, ಅದರ ನೆತ್ತಿಯ ಉತ್ತರಕ್ಕೆ ಅಥವಾ ದಕ್ಷಿಣಕ್ಕೆ ಇರುತ್ತದೆ. ಇದಕ್ಕೆ ಭೂಮಿಯ ಅಕ್ಷ 23.5 ಡಿಗ್ರಿ ಒರೆಯಾಗಿರುವುದೇ ಕಾರಣ. ಪ್ರತಿ ಋತುಮಾನಗಳಿಗೂ ಇದೇ ಕಾರಣ. ಭೂಮಿಯ ಸಮಭಾಜಕ ವೃತ್ತದ ರೇಖೆ ಹಾದುಹೋಗಿರುವ ಉತ್ತರ ಮತ್ತು ದಕ್ಷಿಣದ ಪ್ರದೇಶಗಳಲ್ಲಿ ಮಾತ್ರ ಸೂರ್ಯ ವರ್ಷದಲ್ಲಿ 2 ಬಾರಿ ನಿರ್ಧಿಷ್ಟವಾಗಿ ನೆತ್ತಿಯ ಮೇಲೆ ಬರುವುದೇ “ಶೂನ್ಯ ನೆರಳಿನ ದಿನ”. ಇದು ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ದಿನಾಂಕಗಳಲ್ಲಿ ನಡೆಯುತ್ತದೆ.
ನಮ್ಮ ಚಿತ್ರದುರ್ಗದಲ್ಲಿ ಇದೇ ಏಪ್ರಿಲ್ 28 ರ ಭಾನುವಾರ 12.22 ಕ್ಕೆ ಸರಿಯಾಗಿ ಶೂನ್ಯ ನೆರಳನ್ನು ನೋಡಬಹುದಾಗಿದೆ. ಕೆಲ ನಿಮಿಷಗಳ ಕಾಲ ನೆರಳು ಕಾಣಿಸುವುದೇ ಇಲ್ಲ.
ಅಂದು ಸಮತಟ್ಟಾದ ನೆಲದ ಮೇಲೆ ಉದ್ದನೆಯ ಕಂಬವನ್ನು ಅಥವಾ ದ್ವಜಸ್ಥಂಭದ ಸಹಾಯದಿಂದ ಶೂನ್ಯ ನೆರಳನ್ನು ಗುರುತಿಸಬಹುದು ಎಂದು ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಎಚ್.ಎಸ್.ಟಿ.ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.